ಪಾದಯಾತ್ರೆಯಲ್ಲಿ ರಾಜಕೀಯ ಪುಡಾರಿಗಳ ದರ್ಬಾರು ಜೋರಾಗಿದ್ದು, ಮೇಕೆದಾಟು - ಎಣ್ಣೆ ಘಾಟು" ಎಂದು ಬಿಜೆಪಿ ಟೀಕಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ ಎಂದು ವ್ಯಂಗ್ಯವಾಡಿದೆ.
ಸುಳ್ಳಿನಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ & ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು - ಎಣ್ಣೆ ಘಾಟು" ಎಂದು ಆರೋಪಿಸಿದೆ. ಮೇಕೆದಾಟು ಯಾತ್ರೆ ಸುಳ್ಳಿನಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಬಣಗಳು ಜಾಗ ಇದ್ದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್, ಕಟೌಟು, ಮೂಲಕ ತಮ್ಮ ತಮ್ಮ ನಾಯಕರ ಗುಣಗಾನ ಮಾಡು ತ್ತಿವೆ. ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು ಎಂದು ವ್ಯಂಗ್ಯವಾಡಿದೆ.