ಪ್ರತಿಭಟನೆ ಹಾದಿ ಹಿಡಿದ ಆಭರಣ ವರ್ತಕರು

ಶನಿವಾರ, 29 ಸೆಪ್ಟಂಬರ್ 2018 (15:51 IST)
ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾಣಿಜ್ಯ ನಗರಿಯಲ್ಲಿ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದಿದ್ದರು.

ಹುಬ್ಬಳ್ಳಿಯ ಆಭರಣ ತಯಾರಕ ಮತ್ತು ವರ್ತಕರ ಸಂಘದವರು ಇವತ್ತು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಭರಣ ತಯಾರಕರು ಮತ್ತು ವರ್ತಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ರೈತರಿಗೆ ನೀಡುವಂತೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಆಭರಣ ಕೆಲಸಗಾರರ ಕ್ಷೇಮ ಕಾಯಲು ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ರಿಕವರಿ ಹೆಸರಿನಲ್ಲಿ ಆಭರಣ ವರ್ತಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಆಭರಣ ತಯಾರಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಶಶಿಧರ ಮಾಡ್ಯಾಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ