ಇದರ ಅಧಿಸೂಚನೆ ಈಗಾಗಲೇ ಆಯೋಗದ ವೆಬ್‌ಸೈಟ್ https://ssc.nic.in ನಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಸಲು ಜ. 23 ಕೊನೆಯ ದಿನವಾಗಿದೆ. ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದ ಯಾವುದೇ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. 2022ರ ಜ. 1ಕ್ಕೆ ಅನ್ವಯವಾಗುವಂತೆ 18ರಿಂದ 30 ವರ್ಷ (ಇತರ ವರ್ಗಗಳಿಗೆ ಅರ್ಹ ಸಡಿಲಿಕೆಯೊಂದಿಗೆ ) ಹೊಂದಿದವರಿಗೆ ಅವಕಾಶ ಇರುತ್ತದೆ.
ಆಸಕ್ತರು https://ssc.nic.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ, ವಯೋಮಿತಿ, ಮೀಸಲಾತಿ, ಪರೀಕ್ಷಾ ವಿಧಾನ, ಶುಲ್ಕ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯು ಆಯೋಗದ ವೆಬ್‌ಸೈಟ್‌ನಲ್ಲಿರುವ ನೋಟಿಫಿಕೇಷನ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.