ಸಿದ್ದರಾಮಯ್ಯಗೆ ಈ ವಿಷಯದಲ್ಲಿ ಟಾಂಗ್ ನೀಡಿದ ಕೇಂದ್ರ ಸಚಿವ

ಶನಿವಾರ, 5 ಅಕ್ಟೋಬರ್ 2019 (19:45 IST)
ನೆರೆ ಪರಿಹಾರ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿದಿದೆ.

ಬಿಜೆಪಿ ಸರ್ಕಾರ ನೀಡಿದ ಪರಿಹಾರದ ಹಣವಷ್ಟು ಯುಪಿಎ ಸರ್ಕಾರ ನೀಡಿಲ್ಲ. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ನೆರೆ ಪರಿಹಾರದ ವಿಷಯವಾಗಿ ಅಸಂಬದ್ಧ ಹೇಳಿಕೆ ನೀಡಿರುವುದು ಖಂಡನೀಯ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ 2009 -10 ರಲ್ಲಿ 7000 ಕೋಟಿ ಕೇಳಿದಾಗ 500 ಕೋಟಿ, 2010-11 ರಲ್ಲಿ 3600 ಕೋಟಿ ಕೇಳಿದಾಗ 126 ಕೋಟಿ, 2012-13 11000 ಸಾವಿರ ಕೋಟಿಯಲ್ಲಿ 397 ಕೋಟಿ, 2013-14 ರಲ್ಲಿ 27000 ಸಾವಿರ ಕೋಟಿಯಲ್ಲಿ 200 ಕೋಟಿಯನ್ನು ಬಿಡುಗಡೆ ಮಾಡಿದೆ. ಹಳೆಯ ದಾಖಲೆಗಳನ್ನು ಸಿದ್ದರಾಮಯ್ಯ ತಿಳಿದುಕೊಂಡು ಮಾತನಾಡಲಿ ಎಂದಿದ್ದಾರೆ.

ಯುಪಿಎ ಸರ್ಕಾರ ಜಾರಿಗೆ ತಂದ ಎನ್ ಡಿ ಆರ್ ಎಫ್ ನ್ನು ಮೋದಿ ಸರ್ಕಾರ ಮುಂದುವರೆಸುತ್ತಿದೆ ಅಷ್ಟೇ. ಈ ಬಾರಿ ರಾಷ್ಟ್ರದಲ್ಲಿ 13 ರಾಜ್ಯಗಳಲ್ಲಿ ಏಕಕಾಲದಲ್ಲಿ ನೆರೆ ಪ್ರವಾಹ ಬಂದಿದ್ದು, ಈ ಹಿನ್ನಲೆಯಲ್ಲಿ ಯಾವ ರಾಜ್ಯಕ್ಕೂ ಅನ್ಯಾಯ ಮಾಡದಂತೆ ಪರಿಹಾರ ಒದಗಿಸಲಾಗುವುದು. ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರ 907 ಕೋಟಿ ರೂ. ಕೊಟ್ಟಿದ್ದರೆ ಐದೇ ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನೆರೆ ಪರಿಹಾರಕ್ಕಾಗಿ ಮಧ್ಯಂತರವಾಗಿ 1200 ಕೋಟಿ ಕೊಟ್ಟದ್ದನ್ನು ಬಿಟ್ಟು 5693 ಕೋಟಿ ಕೊಟ್ಟಿದೆ.

ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದವರಾದವರಾಗಿದ್ದು, ನೆರೆ ಪರಿಹಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರಾಜಕೀಯವನ್ನು ಚುನಾವಣೆ ಬಂದಾಗ ಮಾಡೋಣ. ಇದೀಗ ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ