ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು

ಗುರುವಾರ, 6 ಜುಲೈ 2023 (15:58 IST)
ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಫಿತೋಟದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಬೇಲೂರು ತಾಲೂಕಿನ ಅಂಕಿಹಳ್ಳಿಪೇಟೆ ಗ್ರಾಮದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ..ಒಂದೇ ಗುಂಪಿನಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿವೆ. ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೋಟದಲ್ಲೆಲ್ಲಾ ಓಡಾಡಿ, ತೋಟವನ್ನ ನಾಶ ಮಾಡಿವೆ. ಕಾಫಿಯ ಜೊತೆಗೆ ರೈತರು ಬೆಳೆದಿರೋ ಬೆಳೆಗಳನ್ನೆಲ್ಲಾ ಕಾಡಾನೆಗಳ ಹಿಂಡು ತುಳಿದು ಹಾಳು ಮಾಡ್ತಿವೆ. ಕಾಡಾನೆಗಳ ಗುಂಪನ್ನು ಕಂಡು ಮಲೆನಾಡಿನ ಜನ ಆತಂಕಕ್ಕೊಳಗಾಗಿದ್ದು, ಸ್ಥಳೀಯರಿಗೆ ಕಾಡಾನೆಗಳ ಚಲನವಲನಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ