ಪಾಲಿಕೆಯಿಂದ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ
ಮಳೆಗಾಲ ಎದುರಿಸಲು ತುಮಕೂರು ಮಹಾನಗರ ಪಾಲಿಕೆ ಸಜ್ಜಾಗಿದ್ದು, 5 ವರ್ಷಗಳಿಂದ ಸ್ವಚ್ಛಗೊಳ್ಳದ ರಾಜಕಾಲುವೆಗಳನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದೆ. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ಹೂಳು ತೆಗೆದು, ಕಸ ಕಟ್ಟಿಕೊಳ್ಳದಂತೆ ಮುಂಜಾಗ್ರತೆ ವಹಿಸಿ ಪಾಲಿಕೆ ಅಧಿಕಾರಿಗಳು ಸ್ವಚ್ಛಗೊಳಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಾದ ಎಡವಟ್ಟುಗಳನ್ನ ತಪ್ಪಿಸಲು ಪಾಲಿಕೆ ಕಮಿಷನರ್ ದರ್ಶನ್ ಮುಂಜಾಗ್ರತೆ ವಹಿಸಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡಿದ್ದಾರೆ. ತುಮಕೂರು ನಗರದ ಹಲವು ಕಡೆ ಸ್ವಚ್ಛತಾ ಕಾಮಗಾರಿ ಆರಂಭಗೊಂಡಿದ್ದು, ರಸ್ತೆಯ ಇಕ್ಕೆಲಗಳನ್ನು ಪಾಲಿಕೆ ಸ್ವಚ್ಚಗೊಳಿಸಲು ಸಿಬ್ಬಂದಿಗಳಿಗೆ ಆದೇಶಿಸಿದ್ದಾರೆ.