ಬೆಂಗಳೂರು: ಗೋವಾ ರಾಜ್ಯದಲ್ಲಿ ₹100ಗೆ ಸಿಗುವ ಮದ್ಯಕ್ಕೆ ಕರ್ನಾಟಕದಲ್ಲಿ ₹305 ನೀಡಬೇಕು. ಮದ್ಯಪ್ರಿಯರಿಗೆ ಕಾಂಗ್ರೆಸ್ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇದೀಗ ಮದ್ಯದ ಬೆಲೆ ಕೇಳಿಯೇ ಬಡವರ್ಗದ ಮದ್ಯದ ಪ್ರಿಯರು ಅಮಲಿಗೊಳಗಾಗುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಬಿಜೆಪಿ ಸರ್ಕಾರ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ಬರೆದುಕೊಂಡಿದೆ.
ಗ್ಯಾರಂಟಿಗಳಿಂದ ಕಂಗೆಟ್ಟಿರುವ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಸಿದ್ದರಾಮಯ್ಯ
ಸರ್ಕಾರ ಅಬಕಾರಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮದ್ಯದ ಮೇಲೆ ವಿಪರೀತವಾಗಿ ಸುಂಕ ವಿಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ
ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಮದ್ಯದ ದರ ಏರಿಕೆಯಿಂದಾಗಿ ಬೆಲೆ ಕೇಳಿಯೇ ಬಡವರ್ಗದ ಮದ್ಯಪ್ರಿಯರು ಅಮಲಿಗೊಳಗಾಗುತ್ತಿದ್ದಾರೆ.
ಗೋವಾ ರಾಜ್ಯದಲ್ಲಿ100 ರೂಪಾಯಿಗಳಿಗೆ ಸಿಗುವ ಮದ್ಯಕ್ಕೆ ಕರ್ನಾಟಕದಲ್ಲಿ ₹305 ವಿಧಿಸಲಾಗುತ್ತಿದೆ. ಮದ್ಯದ ಮೇಲೆ ಶೇ. 80 ರಷ್ಟು ತೆರಿಗೆ ವಿಧಿಸುವ ಮೂಲಕ ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸುವ ರಾಜ್ಯ ಎಂಬ ಕುಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ತನ್ನ ಗ್ಯಾರಂಟಿಗಳನ್ನು ಜಾರಿಯಲ್ಲಿರಿಸಲು ಅತೀ ಹೆಚ್ಚು ತೆರಿಗೆ ವಿಧಿಸಿದ್ದೇ ಹೊರತು ಇದು ಯಾವುದೇ ಜನಪರ ಕಾಳಜಿಯಿಂದಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯದ ಮೇಲಿನ ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ, ಮದ್ಯದ ದುಶ್ಚಟದಿಂದ ಜನರನ್ನು ವಿಮುಖರನ್ನಾಗಿಸಲು ಬೆಲೆ ಏರಿಕೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಅಷ್ಟು ಜನಪರ, ಬಡವರ ಬಗ್ಗೆ ಕಾಳಜಿ ಇದ್ದರೆ, ಮದ್ಯವನ್ನೇ ಸಂಪೂರ್ಣವಾಗಿ ನಿಷೇಧಿಸಬಹುದಲ್ಲವೇ?