ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ಪ್ರಸ್ತಾವನೆ ವಾಪಸ್ ಕಳುಹಿಸಿದ ರಾಜ್ಯಪಾಲರು

ಶುಕ್ರವಾರ, 27 ಮೇ 2016 (12:27 IST)
ನೂತನ ಲೋಕಾಯುಕ್ತರ ಆಯ್ಕೆಗಾಗಿ ರಾಜ್ಯ ಸರಕಾರ ಎರಡನೆ ಭಾರಿಗೆ ಶಿಫಾರಸ್ಸು ಮಾಡಿದ್ದ ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ಹೆಸರನ್ನು ರಾಜ್ಯಪಾಲ ವಜೂಭಾಯಿ ವಾಲಾ ವಾಪಸ್ ಕಳುಹಿಸಿದ್ದಾರೆ.
 
ರಾಜ್ಯ ಸರಕಾರ ಸಾಕಷ್ಟು ವಿರೋಧದ ಮಧ್ಯ ಎರಡನೆಯ ಭಾರಿಗೆ ನೂತನ ಲೋಕಾಯುಕ್ತರ ಆಯ್ಕೆಗಾಗಿ ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ರಾಜ್ಯ ಸರಕಾರ ನೀಡಿರುವ ಸ್ಪಷ್ಟನೆ ಕಾನೂನು ಬದ್ಧವಾಗಿಲ್ಲ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಸರಕಾರದ ಶಿಫಾರಸ್ಸನ್ನು ವಾಪಸ್ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.
 
ಈ ಹಿಂದೆ ಲೋಕಾಯುಕ್ತರ ನೇಮಕಾತಿ ವಿಚಾರವಾಗಿ ರಾಜ್ಯ ಸರಕಾರ, ವಜೂಭಾಯಿ ವಾಲಾ ಅವರಿಗೆ ನ್ಯಾಯಮೂರ್ತಿ ಎಸ್‌.ಆರ್.ನಾಯಕ್ ಅವರನ್ನು ಆಯ್ಕೆಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯಪಾಲರು ರಾಜ್ಯ ಸರಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ,ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಪರಿಶೀಲನೆ ನಡೆಸಲಾಗುವುದು ಎಂದು ಸರಕಾರಕ್ಕೆ ಚಾಟಿ ಬೀಸಿದ್ದರು. ಇದೀಗ ಎರಡನೆಯ ಭಾರಿಯೂ ಸರಕಾರದ ಪ್ರಸ್ತಾವನೆ ವಾಪಸ್ ಕಳುಹಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ