ಇಂಜೆಕ್ಷನ್ ಕೊಡಲು ಗೊತ್ತಿರುವ ಕೆ ಸುಧಾಕರ್‌ಗೆ ದುಡ್ಡು ಹೊಡೆಯುವುದು ಗೊತ್ತು: ಚಲುವರಾಯಸ್ವಾಮಿ ವ್ಯಂಗ್ಯ

Sampriya

ಗುರುವಾರ, 31 ಜುಲೈ 2025 (17:04 IST)
ಬೆಂಗಳೂರು: ಸಂಸದ ಡಾ.ಕೆ ಸುಧಾಕರ್‌ಗೆ ಇಂಜೆಕ್ಷನ್ ಕೊಡುವುದು ಗೊತ್ತು, ದುಡ್ಡು ಹೊಡೆಯುವುದು ಗೊತ್ತು. ಎಲ್ಲರಿಗೂ ಕೋವಿಡ್ ಸಂದರ್ಭದಲ್ಲಿ ಎಷ್ಟು ನಿಭಾಯಿಸಿದ್ದರು ಎಂದು ಗೊತ್ತಲ್ವಾ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

 ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಸುಧಾಕರ್‌ ಅವರ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಡಾಕ್ಟರ್ ಓದಿದ್ದಾರೋ ಇಲ್ವೋ ಗೊತ್ತಿಲ್ಲ, ಕೇಂದ್ರದಲ್ಲಿ ಸಂಸದರಾಗಿದ್ದಾರೆ. ರಸಗೊಬ್ಬರದ ವಿಚಾರವಾಗಿ ಬುಧವಾರ ಎಲ್ಲಾ ಡಿಟೇಲ್ಸ್ ಕೊಟ್ಟಿದ್ದೇನೆ. ಸಣ್ಣ ಹಿಡುವಳಿದಾರರು ಇರ್ತಾರೆ, ದೊಡ್ಡ ಹಿಡುವಳಿದಾರರು ಇರ್ತಾರೆ. ನಮಗೆ ಕೇಂದ್ರ ಸರ್ಕಾರ 1.36 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೊಟ್ಟಿಲ್ಲ, 2.28 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬರಬೇಕಿತ್ತು. ಇದಕ್ಕಾಗಿ ಕೃಷಿ ಸಚಿವರಿಗೆ ಮನವಿ‌ ಮಾಡಿದ್ದೇವೆ ಎಂದರು. 

ವಿಪಕ್ಷ ನಾಯಕ ಆರ್‌ ಅಶೋಕ್ ಸುಮ್ಮನೆ ಮಾತನಾಡ್ತಾರೆ, ಅವರಿಗೆ ಹಿಂದಿಲ್ಲ ಮುಂದಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಬೆಲೆ ಫಿಕ್ಸ್ ಮಾಡುವುದು ಕೇಂದ್ರ ಸರ್ಕಾರ, ಪೊರೈಕೆ ಮಾಡುವವರು ಅವರೇ ಆಗಿದ್ದು, ನಮ್ಮದು ಬರಿ ಹಂಚಿಕೆ ಮಾತ್ರ ಎಂದು ಆರೋಪಕ್ಕೆ ಪ್ರತಿಕ್ರಿಯಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ