ಬೆಂಗಳೂರಿನಲ್ಲಿ ಯಾವಾಗ ಜಾತಿಗಣತಿ ಆರಂಭ: ಇಲ್ಲಿದೆ ಉತ್ತರ
ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಅಯುಕ್ತ ಮಹೇಶ್ವರ ರಾವ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಅಕ್ಟೋಬರ್ 3 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 7 ರೊಳಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ಮುಗಿಯಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣಕ್ಕೆ ಆಮೆಗತಿಯಲ್ಲಿ ಗಣತಿ ನಡೆಯುತ್ತಿದೆಯಷ್ಟೇ.
ಮೂಲಗಳ ಪ್ರಕಾರ ಇದುವರೆಗೆ ಕೇವಲ ಶೇ.13 ರಷ್ಟು ಮಾತ್ರ ಜಾತಿಗಣತಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಪ್ರಾರಂಭವೇ ಆಗಿಲ್ಲ. ರಾಜ್ಯಾದ್ಯಂತ ಇನ್ನೂ 1.75 ಕೋಟಿ ಮನೆ ಸಮೀಕ್ಷೆ ಬಾಕಿಯಿದೆ ಎಂದು ವರದಿಗಳು ಹೇಳುತ್ತಿವೆ.