ಕಾಂಗ್ರೆಸ್ ಪಾದಯಾತ್ರೆ ಕುರಿತು ಕೈ ನಾಯಕರ ಸಕಲ ಸಿದ್ಧತೆ

ಭಾನುವಾರ, 28 ಆಗಸ್ಟ್ 2022 (21:15 IST)
ಕೋಮುವಾದಿಗಳ ಕೈಗೆ ಅಧಿಕಾರ ಸಿಕ್ಕಮೇಲೆ ಸಮಾಜ ಹೊಡೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಇದಕ್ಕಾಗಿ ಕಾಂಗ್ರೆಸ್ ಪಕ್ಷ ದೇಶವನ್ನ ಒಗ್ಗೂಡಿಸುವಂತಹ ಪ್ರಯತ್ನ ಮಾಡ್ಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಪಿಸಿಸಿ ಕಛೇರಿಯ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
 
ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವವನ್ನ ಬೇರ್ಪಡಿಸಲು ಸಾಧ್ಯವಿಲ್ಲ.ದೇಶದಲ್ಲಿ ಐಕ್ಯತೆಯನ್ನ ಉಳಿಸಲು 3500 ಕಿಮೀ ಪಾದಯಾತ್ರೆ ನಡೆಯುತ್ತಿದೆ.511  ಕಿ ಮೀ ಕರ್ನಾಟಕದಲ್ಲಿ ಪಾದಯಾತ್ರೆ ನಡೆಯುತ್ತಿದೆ.ರಾಹುಲ್ ಗಾಂಧಿಯವ್ರ ಜೊತೆಗ 150 ಜನ ಪಾದಯಾತ್ರೆ ಮಾಡ್ತಾರೆ.ಒಟ್ಟು 300 ಜನ ರಾಹುಲ್ ಗಾಂಧಿ ಜೊತೆಗೆ ಪಾದಯಾತ್ರೆ ಮಾಡುತ್ತಾರೆ.ನಾವು ಎಲ್ಲಾರೂ ಈ ಪಾದಯಾತ್ರೆ ಮಾಡುತ್ತೇವೆ.ಸೆಪ್ಟೆಂಬರ್‌ 7 ರಂದು ಪ್ರಾರಂಭವಾಗಿ 30 ರಂದು ಮೈಸೂರಿಗೆ ರಾಹುಲ್ ಗಾಂಧಿ ಬರ್ತಾರೆ.ರಾಹುಲ್ ಗಾಂಧಿಯವರು 150 ದಿನ, ಒಟ್ಟು 3500 ಕಿ ಮೀ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ.ಜನರಲ್ಲಿ ಹೊಸ ಭರವಸೆಯನ್ನ ಮೂಡಿಸುವ ಕೆಲಸ ಮಾಡ್ತಾರೆ. ಈ ಸಮಾಜ ಒಟ್ಟಾಗಿ ಬದುಕಬೇಕಾಗಿದೆ .ಈ ಸಂದರ್ಭದಲ್ಲಿ ಐಕ್ಯತೆಯನ್ನ ಸಾರುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ