ರಾಜ್ಯದಲ್ಲಿ ಕೊರೋನಾ ಜೊತೆಗೆ ಓಮಿಕ್ರಾನ್ ಆತಂಕ ಶುರುವಾಗಿದೆ, ಇದರ ಜೊತೆಗೆ ರಾಜ್ಯ ಸರ್ಕಾರ ಹೊಸ ವರ್ಷ ಆಚರಣೆಗೆ ಒಪ್ಪಿಗೆ ಸೂಚಿಸಿದೆ, ಆದರೆ ಸಾರ್ವಜನಿಕವಾಗಿ ಆಚರಣೆಗೆ ನಿರ್ಬಂಧ ವಿಧಿಸಿದೆ.
ಬೆಂಗಳೂರು ನಗರದ ಹೋಟೆಲ್, ಪಬ್ ಸೇರಿದಂತೆ ಯಾವುದೇ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಬುಕ್ಕಿಂಗ್ ಇದ್ದವರಿಗೆ ಮಾತ್ರವೇ, ಪಬ್ ಗಳಿಗೆ ಎಂಟ್ರಿ ಹೋಟೆಲ್ ಆಗಿದೆ. ಕೋವಿಡ್ ಪರೀಕ್ಷೆ ನೆಗೆಟಿವ್ ವರದಿ, ಸಂಪೂರ್ಣ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಡಿ. 31ರಂದು ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. . ಒಂದು ವೇಳೆ ಈ ಎಲ್ಲಾ ನಿಯಮವನ್ನು ಮೀರಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಲಾಗಿದೆ.