ತಮಿಳುನಾಡಿನಲ್ಲಿ ಕನ್ನಡ ಚಿತ್ರ ನಾಗರಹಾವು ಪ್ರದರ್ಶನಕ್ಕೆ ತಡೆ

ಶುಕ್ರವಾರ, 14 ಅಕ್ಟೋಬರ್ 2016 (13:33 IST)
ತಮಿಳುನಾಡಿನಲ್ಲಿ 70 ಸ್ಕ್ರೀನ್‌ಗಳಲ್ಲಿ ಇಂದು ಬಿಡುಗಡೆಯಾಗಬೇಕಾಗಿದ್ದ ನಾಗರಹಾವು ಚಿತ್ರಕ್ಕೆ ತಮಿಳು ಸಂಘಟನೆಗಳು ಅಡ್ಡಿಪಡಿಸಿದ್ದು, ಚಿತ್ರಪ್ರದರ್ಶನ ಮಾಡದಂತೆ ತಡೆಯೊಡ್ಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ನಗರದ ಅಶೋಕ್ ನಗರದಲ್ಲಿರುವ ಉದಯ್ ಚಿತ್ರಮಂದಿರದಲ್ಲಿ ಇಂದು ಕನ್ನಡ ಭಾಷೆಯ ನಾಗರಹಾವು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ತಮಿಳು ಸಂಘಟನೆಗಳು ಯಾವುದೇ ಕಾರಣಕ್ಕೆ ಚಿತ್ರ ಪ್ರದರ್ಶಿದಂತೆ ಕೋಲಾಹಲದ ವಾತಾವರಣ ಸೃಷ್ಟಿಸಿದ್ದರಿಂದ ಚಿತ್ರಪ್ರದರ್ಶನ ಮುಂದೂಡಲಾಗಿದೆ.
 
ಚೆನ್ನೈನ ಪೊಲೀಸ್ ಆಯುಕ್ತರು ತಮಿಳು ಸಂಘಟನೆಗಳು ಹೆಚ್ಚಿನ ಪ್ರತಿಭಟನೆಗಿಳಿಯುವ ಸಾಧ್ಯತೆಗಳು ಕಂಡು ಚಿತ್ರಪ್ರದರ್ಶಿಸದಂತೆ ಚಿತ್ರಮಂದಿರಗಳ ಮಾಲೀಕರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.
 
ಕಾವೇರಿ ವಿವಾದ ಕರ್ನಾಟಕ ರಾಜ್ಯದಲ್ಲಿ ತಣ್ಣಗಾಗಿದ್ದರೂ ತಮಿಳುನಾಡಿನಲ್ಲಿ ತಣ್ಣಗಾದಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ಕನ್ನಡಿಗರು ಅನುಮತಿ ನೀಡಿದ್ದಾರೆ. ಆದರೆ, ತಮಿಳಿನಲ್ಲಿ ಕನ್ನಡ ಚಿತ್ರಗಳಿಗೆ ನಿಷೇಧ ಹೇರಿರುವುದು ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಗಳಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ