ರಾಜ್ಯ ಸಂಪುಟದ ಸಚಿವರಂತೆ ಸರ್ಕಾರದ ಎಲ್ಲ ವಿಧದ ಗೌರವ,
ಸ್ಥಾನಮಾನ, ಸೌಲಭ್ಯಗಳನ್ನು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಪಡೆಯಲಿದ್ದಾರೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಈ ವರೆಗೆ ಪರಿಷತ್ತು 25ಅಧ್ಯಕ್ಷರನ್ನು ಕಂಡಿದೆ. ಆದರೆ ಈ ವರೆಗೆ ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸ್ಥಾನಮಾನ ದೊರೆತಿರಲಿಲ್ಲ. ಇದೀಗ ಸುಮಾರು 107ವರ್ಷ ಬಳಿಕ ಆ ಸಚಿವ ದರ್ಜೆ ಸ್ಥಾನಮಾನಗಳು ಲಭಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.