ಕನ್ನಡಿಗರ, ಕರ್ನಾಟಕದ ಹಿತ ಮುಖ್ಯ-ಸುನೀಲ್ ಕುಮಾರ್
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರ ಗಡಿ ವಿಚಾರಕ್ಕೆ ಕನ್ನಡಿಗರ ಭಾವನೆಗಳಿಗೆ ಗರಿಷ್ಠ ಆದ್ಯತೆ ಕೊಡುತ್ತದೆ. ಕನ್ನಡಿಗರ ಯಾವುದೇ ಭಾವನೆಯನ್ನ ಧಿಕ್ಕರಿಸುವ ಪ್ರಯತ್ನ ಮಾಡಿಲ್ಲ, ಮಾಡುವುದಿಲ್ಲ ಎಂದು ಬೆಳಗಾವಿಯಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಗಡಿ ವಿವಾದ ವಿಚಾರವಾಗಿ ಇಬ್ಬರು ಸಿಎಂಗಳು ಕೇಂದ್ರ ಗೃಹ ಸಚಿವರ ಜೊತೆಗೆ ಮಾತನಾಡಿದ್ದಾರೆ. ಏನೇ ಮಾತುಕತೆ ಇದ್ದರೂ ಕನ್ನಡಿಗರ, ಕರ್ನಾಟಕದ ಹಿತ ಪ್ರಮುಖವಾದದ್ದು. ಕರ್ನಾಟಕದ ಹಿತವನ್ನ ಬಿಟ್ಟು ಬೇರೆ ಯಾವುದೇ ಪ್ರಮುಖವಲ್ಲ ಅದನ್ನ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ಮಸೂದೆ ಮಂಡನೆ ಮಾಡ್ತಿವಿ ನಮ್ಮ ಸರ್ಕಾರ ಗಡಿಯಲ್ಲಿ ಶಾಲಾ,ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ಕೊಡುತ್ತದೆ. ಗಡಿಯಷ್ಟೇ ಅಲ್ಲ ಜಗತ್ತಿನ ಯಾವುದೇ ಭಾಗದಲ್ಲಿ ಇರುವ ಕನ್ನಡಿಗರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಸರ್ಕಾರದ್ದು ಮಹಾರಾಷ್ಟ್ರ ಅಷ್ಟೇ ಅಲ್ಲ ಜಗತ್ತಿನ ಎಲ್ಲೇ ಇದ್ದರೂ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರ ಮಾಡಲಿದೆ ಎಂದು ಸಚಿವ ಸುನೀಲ್ ಕುಮಾರ್ ತಳಿಸಿದ್ದಾರೆ.