ತಮಿಳು ಅಜ್ಜಿಗೆ ರಕ್ಷಣೆ: ಆಕ್ರೋಶದ ಮಧ್ಯ ಮಾನವೀಯತೆ ಮೆರೆದ ಕನ್ನಡಿಗರು

ಸೋಮವಾರ, 12 ಸೆಪ್ಟಂಬರ್ 2016 (18:30 IST)
ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದೆ. ಏತನ್ಮಧ್ಯೆ ಗಲಭೆಯಲ್ಲಿ ಸಿಲುಕಿರುವ ತಮಿಳು ಅಜ್ಜಿಯನ್ನು ಸುರಕ್ಷಿತವಾಗಿ ಆಟೋ ಮೂಲಕ ಮನೆಗೆ ಕಳುಹಿಸಿ ಕನ್ನಡಿಗರು ಮಾನವೀಯತೆ ಮೆರೆದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 
 
ಕಾವೇರಿ ನದಿ ವಿಚಾರವಾಗಿ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುವ ಮೂಲಕ ತಮಿಳಿಗರು ದೌರ್ಜನ್ಯ ಎಸಗಿದ್ದರು. ಆದರೆ, ಅಸಹಾಯಕವಾಗಿ ಹೋರಾಟ ವೇಳೆ ಸಿಲುಕಿದ್ದ ತಮಿಳು ಅಜ್ಜಿಗೆ ರಕ್ಷಣೆ ಮಾಡುವ ಮೂಲಕ ಕನ್ನಡಿಗರು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. 
 
ಇಂದು ಮಂಜಾನೆಯಷ್ಟೇ ತಮಿಳುನಾಡಿನ ಕರ್ನಾಟಕ ಮೂಲದ ವುಡ್‌ಲ್ಯಾಂಡ್ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಕಿಡಿಗೇಡಿಗಳು ದೌರ್ಜನ್ಯ ಎಸಗಿದ್ದರು. ಅದಲ್ಲದೇ ಕರ್ನಾಟಕದಿಂದ ತೆರಳಿದ ಭಕ್ತರ ಮೇಲೆ ಹಲ್ಲೆ ಮಾಡುವ ಮೂಲಕ ಅಟ್ಟಹಾಸ ಮೆರೆದಿರುವ ಘಟನೆಗಳು ವರದಿಯಾಗಿದ್ದವು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ