ಸಿಎಂ ಸಿದ್ದರಾಮಯ್ಯ ಬಗ್ಗೆ ತೀವ್ರವಾಗ್ದಾಳಿ ನಡೆಸಿದ ಕಾರಜೋಳ

geetha

ಶನಿವಾರ, 3 ಫೆಬ್ರವರಿ 2024 (15:33 IST)
ಬೆಂಗಳೂರು : ರಾಜ್ಯದ ಜನರಿಗೆ ಪೊಳ್ಳು ಭರವಸೆ ನೀಡಿ, ಪಂಗನಾಮ ಹಾಕಿ ಅಧಿಕಾರಕ್ಕೆ ಬಂದಿರುವ ಮಜಾವಾದಿ ಸಿಎಂ ಸಿದ್ದರಾಮಯ್ಯ ಅವರ ನಿದ್ದೆಯಲ್ಲಿಯೂ ತುಷ್ಟೀಕರಣದ ರಾಜಕಾರಣ ಅಡಗಿದೆ ಎಂದು ಗೋವಿಂದ ಕಾರಜೋಳ ಟೀಕಿಸಿದ್ದಾರೆ. ಬಿಜೆಪಿಯ  ಮಾಜಿ ಸಚಿವ ಗೋವಿಂದ ಕಾರಜೋಳ, ಸಿಎಂ ಸಿದ್ದರಾಮಯ್ಯ ಬಗ್ಗೆ ತೀವ್ರವಾಗ್ದಾಳಿ ನಡೆಸಿದ್ದಾರೆ.  ಸಾಮಾಜಿಕ ಜಾಲತಾಣ ಎಕ್ಸ್‌  ಮೂಲಕ ಸರಣಿ ವ್ಯಂಗ್ಯಚಿತ್ರಗಳನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಅಭಿವೃದ್ಧಿ ಕೇಳಿದರೆ ನಿದ್ದೆ , ಬಿಟ್ಟಿ ಪ್ರಚಾರಕ್ಕೆ ಎದ್ದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

ರಾಮಮಂದಿರ ಉದ್ಘಾಟನೆ ಎಂದರೆ ನಿದ್ದೆ, ಟಿಪ್ಪು ಜಯಂತಿ ಎಂದರೆ ಎದ್ದೆ. ಕನ್ನಡಿಗರು ಕುಡಿಯಲು ನೀರು ಕೇಳಿದರೆ ನಿದ್ದೆ, ಸ್ಟಾಲಿನ್‌ ನಾಡಿಗೆ ಕಾವೇರಿ ಬಿಡಲು ಎದ್ದೆ. ರೈತರು ಪರಿಹಾರ ಕೇಳಿದರೆ ನಿದ್ದೆ, ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡಲು ಎದ್ದೆ. ಮಹಿಳಾ ಸುರಕ್ಷತೆ ಎಂದರೆ ನಿದ್ದೆ, ಮತಾಂಧರ ರಕ್ಷಣೆ ಎಂದರೆ ಎದ್ದೆ ಎಂದು ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ