Karkala: ಮೊಬೈಲ್ ಚಾರ್ಜ್ ಗಿಟ್ಟು ಮಲಗಿದ್ದ ಕುಟುಂಬ, ಇಡೀ ಮನೆಯೇ ಸುಟ್ಟೋಯ್ತು
ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ರಾತ್ರಿ ಮಲಗುವ ಮುನ್ನ ಸೋಫಾ ಮೇಲೆ ಮೊಬೈಲ್ ಇಟ್ಟು ಚಾರ್ಜ್ ಮಾಡಲಿಟ್ಟಿದ್ದರು. ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡಿದೆ.
ಕಿಶೋರ್ ಕುಮಾರ್ ಅವರದ್ದು ಎರಡು ಅಂತಸ್ತುಗಳ ಆರು ಕೊಠಡಿಗಳ ಮನೆಯಾಗಿದೆ. ಒಂದು ಚಿಕ್ಕ ಮೊಬೈಲ್ ಸ್ಪೋಟಗೊಂಡ ತೀವ್ರತೆ ಎಷ್ಟಿತ್ತೆಂದರೆ ಇಡೀ ಮನೆಯೇ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿರುವ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ.
ತಕ್ಷಣವೇ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಮನೆಯಲ್ಲಿ ಏರ್ ಕಂಡೀಷನ್ ಕೂಡಾ ಆನ್ ಆಗಿತ್ತು. ಹೀಗಾಗಿ ಬೆಂಕಿ ಹರಡಿರಬಹುದು ಎಂದು ಶಂಕಿಸಲಾಗಿದೆ.