ಕರ್ನಾಟಕಕ್ಕೂ ಮಿಡತೆಗಳ ಭೀತಿ: ಕಟ್ಟೆಚ್ಚರ ವಹಿಸಲು ರೈತರಿಗೆ ಸೂಚನೆ
ಗುರುವಾರ, 28 ಮೇ 2020 (10:29 IST)
ಬೆಂಗಳೂರು: ಕೊರೋನಾ ಭೀತಿಯಲ್ಲಿರುವ ದೇಶಕ್ಕೆ ಈಗ ಮಿಡತೆಗಳಿಂದ ಕಾಟ ಶುರುವಾಗಿದೆ. ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೂ ಕಾಲಿಡುವ ಭೀತಿ ಎದುರಾಗಿದೆ.
ಈಗಾಗಲೇ ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶದಲ್ಲಿ ಮಿಡತೆಗಳ ಕಾಟಕ್ಕೆ ತುತ್ತಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ದಾಂಗುಡಿಯಿಡುವ ಮಿಡತೆಗಳಿಂದ ಬೆಳೆಗಳಿಗೆ ಅಪಾರ ಪ್ರಮಾಣದ ನಷ್ಟ ಎದುರಾಗಬಹುದಾಗಿದೆ.
ಇದೀಗ ಮಹಾರಾಷ್ಟ್ರ ಮೂಲಕ ಕರ್ನಾಟಕದ ಉತ್ತರ ಭಾಗಗಳಿಗೂ ಮಿಡತೆಗಳು ವ್ಯಾಪಿಸುವ ಭಯ ಎದುರಾಗಿದೆ. ಹೀಗಾಗಿ ರೈತರಿಗೆ ಎಚ್ಚರಿಕೆಯಿಂದಿರುವಂತೆ ಕೃಷಿ ಇಲಾಖೆ ಮಾಹಿತಿ ನೀಡಿದೆ.