ಇನ್ನೂ ಆರಂಭವಾಗದ ವಿಧಾನಸಭೆ ಕಲಾಪ: ಕಾರಣವೇನು ಗೊತ್ತಾ?!

ಶುಕ್ರವಾರ, 9 ಫೆಬ್ರವರಿ 2018 (11:20 IST)
ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪ ಸಾಮಾನ್ಯವಾಗಿ 11 ಗಂಟೆಗೆಲ್ಲಾ ಪ್ರಾರಂಭವಾಗುತ್ತದೆ. ಆದರೆ ಇಂದು ಮಾತ್ರ ಇನ್ನೂ ದಿನದ ಕಲಾಪ ಆರಂಭವಾಗಿಲ್ಲ.
 

ಅದಕ್ಕೆ ಕಾರಣ ಶಾಸಕರ ಗೈರು ಹಾಜರಿ. ಅಧಿವೇಶನ ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟರೂ ಇನ್ನೂ ಶಾಸಕರ ಪತ್ತೆಯಿಲ್ಲ. ಆರಂಭದ ದಿನದಲ್ಲೂ ಸದನದಲ್ಲಿ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿವೆ.

ಕಲಾಪ ನಡೆಯಲು ಕನಿಷ್ಠ 24 ಶಾಸಕರಾದರೂ ಹಾಜರಿರಬೇಕು. ಆದರೆ ಸದಸ್ಯರ ಸಂಖ್ಯೆ 15 ರನ್ನೂ ದಾಟದ ಹಿನ್ನಲೆಯಲ್ಲಿ ಇಂದಿನ ಕಲಾಪ ಇನ್ನೂ ಆರಂಭವಾಗಿಲ್ಲ. ಜನರ ಸಮಸ್ಯೆಗಳಿಗೆ ಕಿವಿಯಾಗಬೇಕಾದ ಜನಪ್ರತಿನಿಧಿಗಳು ಸದನ ಕಲಾಪಗಳ ಬಗ್ಗೆ ಇಷ್ಟೊಂದು ಉದಾಸೀನ ಧೋರಣೆ ತೋರಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ