ಕರ್ನಾಟಕ ಬಂಧ್ ವಿಫಲ: ವಾಟಾಳ್ ವಿರುದ್ಧವೇ ಪ್ರತಿಭಟನೆ

ಸೋಮವಾರ, 12 ಜೂನ್ 2017 (11:05 IST)
ಬೆಂಗಳೂರು:ಶಾಶ್ವತ ನೀರಾವರಿ ಯೋಜನೆ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿ, ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲವಾಗಿದೆ. ಕನ್ನಡ ಪರ ಸಂಘಟನೆಗಳ ಮುಖಂಡರ ನಡುವೆಯೇ ಒಡಕುಂಟಾಗಿದ್ದು, ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಿರುದ್ಧವೇ ಪ್ರತಿಭಟನೆ ನಡೆಸಲಾಗಿದೆ.
 
ವಾಟಾಳ್ ನಾಗರಾಜ್ ಏಕಾಏಕಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಅವರ ವಿರುದ್ಧವೇ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು. ಸುಮ್ಮನಹಳ್ಳಿ ಸೇತುವೆ ಸಮೀಪ ವಾಟಾಳ್ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ ನಡೆಸಿದ್ದಾರೆ.
 
ಇನ್ನು ಕರ್ನಾಟಕ ರಾಜ್ಯವನ್ನು ವಾಟಾಳ್ ನಾಗರಾಜ್ ಅವರಿಗೆ ಬರೆದುಕೊಟ್ಟಿಲ್ಲ. ಪದೇ, ಪದೇ ರಾಜ್ಯ ಬಂದ್ ನಡೆಸುವುದರಿಂದ ಯಾರಿಗೆ ಲಾಭವಿದೆ. ಕನ್ನಡಪರ ಸಂಘಟನೆಗಳು ಸಚಿವರು, ಶಾಸಕರು, ಸಚಿವರ ಮನೆ ಎದುರು ಪ್ರತಿಭಟನೆ ನಡೆಸಬೇಕು. ಅದನ್ನು ಬಿಟ್ಟು ನಾನು ಹೇಳಿದ್ದೇ ಅಂತಿಮ ಎನ್ನುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದ್ದಾರೆ. ಇನ್ನೊಂದೆಡೆ ಕನ್ನಡ ಪರ ಸಂಘಟನೆಗಳಿಗೆ ಬಂದ್ ಗೆ ಅನುಮತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ