ತಮಿಳುನಾಡಿಗೆ ನೀರು ಹರಿಸಲು ಸುಪ್ರೀಂಕೋರ್ಟ್‌ನ ಆದೇಶಕ್ಕೆ ಕರ್ನಾಟಕ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಇಡೀ ಕರ್ನಾಟಕವನ್ನೇ ಬಂದ್ ಮಾಡಲು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು, ನಾಳೆ ಸಭೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ತೇವೆ ಎಂದು ಹೇಳಿದ್ದಾರೆ.
ಕಾವೇರಿ ನೀರಿಗಾಗಿ ಕರುನಾಡಿನಲ್ಲಿ ಹೋರಾಟ ತೀವ್ರಗೊಂಡಿದೆ. ಮಂಗಳವಾರದ ಬೆಂಗಳೂರು ಬಂದ್‌ಗೆ ಬೀದಿಬದಿ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದಾರೆ.. ಮಂಗಳವಾರ ನಾವು ವ್ಯಾಪಾರ ನಡೆಸುವುದಿಲ್ಲ. ಕಾವೇರಿ ನಮ್ಮದು...ಕಾವೇರಿ ನಮ್ಮ ಉಸಿರು. ನೀರಿಲ್ಲ ಅಂದ್ರೆ ಹೂ -ಹಣ್ಣು, ತರಕಾರಿ ಹೇಗೆ ಬೆಳೆಯೋದು. ಹೂ-ಹಣ್ಣು ವ್ಯಾಪಾರ ನಂಬಿಕೊಂಡು ನಾವು ಬದುಕುತ್ತಿರುವುದು. ಹೀಗಾಗಿ ಬಂದ್‌ಗೆ ನಮ್ಮ ಬೆಂಬಲ ಸಂಪೂರ್ಣವಾಗಿ ಇರುತ್ತದೆ ಎಂದಿದ್ದಾರೆ.. ಇನ್ನು ಪಬ್ ಆಂಡ್ ಬಾರ್ ಮಾಲೀಕರ ಅಸೋಸಿಯೇಷನ್ನಲ್ಲಿ ಕೆಲ ಗೊಂದಲ ಸೃಷ್ಠಿಯಾಗಿದ್ದು, ಅಧಿಕಾರಿಗಳ ಜೊತೆ ಸಭೆಯ ನಂತರ ಬಾರ್ ಆಂಡ್ ಪಬ್ ಬಂದ್ ಚಿಂತನೆ ನಡೆಸಲಾಗುತ್ತದೆ ಎಂದು ಪಬ್ ಆಂಡ್ ಬಾರ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಕರುಣಾಕರ ಹೆಗಡೆ ಸ್ಪಷ್ಟನೆ ನೀಡಿದ್ದಾರೆ.