ನಾಳೆ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?

ಭಾನುವಾರ, 27 ಸೆಪ್ಟಂಬರ್ 2020 (12:27 IST)
ಬೆಂಗಳೂರು: ಕೃಷಿ ಕಾಯ್ದೆ ಮತ್ತು ಭೂಮಸೂದೆ ಕಾಯ್ದೆ ವಿರೋಧಿಸಿ ಪ್ರತಿಭಟನೆಗಿಳಿದಿರುವ ರೈತ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ.


ಇನ್ನು, ನಾಳೆ ಕರ್ನಾಟಕ ಬಂದ್ ಪರಿಣಾಮ ಏನೆಲ್ಲಾ ಇರುತ್ತದೆ ಎಂಬ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಈಗಷ್ಟೇ ಲಾಕ್ ಡೌನ್ ನಿಂದ ಹೊರಬಂದ ಜನತೆಗೆ ಈಗ ಬಂದ್ ಬಿಸಿ ತಾಗಲಿದೆ. ಇಂದು ಹಣ್ಣು, ಹಾಲು, ತರಕಾರಿ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳ ಹೊರತಾಗಿ ಉಳಿದವೆಲ್ಲವೂ ಬಂದ್ ಆಗಲಿದೆ. ಬೀದಿ ವ್ಯಾಪಾರ, ಓಲಾ, ಉಬರ್, ಆಟೋ ಸೇವೆಯೂ ಇರಲ್ಲ. ಬಿಎಂಟಿಸಿ ಸಂಚಾರ ಎಂದಿನಂತೆ ನಡೆಯುವುದು ಎಂದು ಸ್ಪಷ್ಟಪಡಿಸಿದೆಯಾದರೂ ಪ್ರತಿಭಟನಾಕಾರರು ಅಡ್ಡಿಪಡಿಸುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ನಾಳೆ ಕರ್ನಾಟಕ ಸಂಪೂರ್ಣ ಸ್ತಬ್ಧವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ