ಅನ್ನಭಾಗ್ಯ ಅಕ್ಕಿ ನೀಡುತ್ತಿರುವುದರ ರಹಸ್ಯ ಇದುವೇ ಎಂದು ವಿಡಿಯೋ ಪ್ರಕಟಿಸಿದ ಬಿಜೆಪಿ

Krishnaveni K

ಶನಿವಾರ, 12 ಅಕ್ಟೋಬರ್ 2024 (10:05 IST)
ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ನೀಡುತ್ತಿರುವುದರ ರಹಸ್ಯ ಇದುವೇ ಎಂದು ಬಿಜೆಪಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಕೇಂದ್ರದ ಮೋದಿ ಸರ್ಕಾರ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ನೀಡುತ್ತದೆ. ಇದನ್ನೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ಎಂದು ನೀಡುತ್ತಿದೆ ಎಂದು ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪ್ರಕಟಿಸಿ ಆರೋಪ ಮಾಡಿದೆ. ಅನ್ನಭಾಗ್ಯ ಅಕ್ಕಿಯ ರಹಸ್ಯ ಇಲ್ಲಿದೆ ಎಂದಿದೆ.

ಕೇಂದ್ರದಿಂದ ಅನ್ನಭಾಗ್ಯ ಯೋಜನೆಗೆ ಸಹಾಯ ಸಿಗುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸುತ್ತಾರೆ. ಆದರೆ ಅಸಲಿಗೆ ಈ ಅಕ್ಕಿ ನೀಡುತ್ತಿವುದು ಕೇಂದ್ರವೇ. ರಾಜ್ಯಕ್ಕೆ ಅಕ್ಕಿ ಸಿಕ್ಕ ಮೇಲೆ ಇದಕ್ಕೆ ಅನ್ನಭಾಗ್ಯ ಎಂದು ಬೋರ್ಡ್ ಹಾಕಿ ತಾವೇ ಕೊಟ್ಟಿದ್ದು ಎಂದು ಪೋಸ್ ಕೊಡುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.

ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಕೇಂದ್ರಿಂದ ಅಕ್ಕಿ ಒದಗಿಸಲು ಕೇಳಿಕೊಂಡಿತ್ತು. ಆದರೆ ಆಗ ಕೇಂದ್ರ ಸರ್ಕಾರ ಅಕ್ಕಿ ನೀಡಿರಲಿಲ್ಲ. ಇತ್ತೀಚೆಗೆ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯೇ ಕೇಂದ್ರದಿಂದ ಅಕ್ಕಿ ಒದಗಿಸಲು ಸಿದ್ಧ. ಆದರೆ ರಾಜ್ಯವೇ ನಿರಾಕರಿಸುತ್ತಿದೆ ಎಂದಿದ್ದರು.

ಅನ್ನಭಾಗ್ಯ ಅಕ್ಕಿಯ ಹಿಂದಿನ ರಹಸ್ಯ ಇದೇ ನೋಡಿ!!#CongressFailsKarnataka pic.twitter.com/Vgm4UjiDCJ

— BJP Karnataka (@BJP4Karnataka) October 12, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ