ಬೆಂಗಳೂರು: ಸದ್ಯ ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಹಾಸ್ಯಮಯ ಮಾತುಕತೆ ನಡೆದಿದೆ.
ವಿರೋಧ ಪಕ್ಷದ ನಾಯಕರ ಮುಖಗಳನ್ನು ಲೈವ್‌ನಲ್ಲಿ ತೋರಿಸಲಾಗುತ್ತಿಲ್ಲ, ಬರೀ ಸಚಿವರ ಮುಖಗಳನಷ್ಟೇ ತೋರಿಸಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪೀಕರ್ ಯುಟಿ ಖಾದರ್ ಬಳಿ ದೂರು ಹೇಳುತ್ತಾರೆ.
ಇನ್ಮುಂದೆ ನಮ್ಮ ಮುಖಗಳು ಕೂಡಾ ಲೈವ್ ಟಿವಿನಲ್ಲಿ ಕಾಣಿಸಿಕೊಳ್ಳಬೇಕಾದರೆ ಸಚಿವ ಪ್ರಿಯಾಂಕಾ ಖರ್ಗೆ ಅಥವಾ ಆಡಳಿತ ಪಕ್ಷದ ಸಚಿವರ ಪಕ್ಕದಲ್ಲಿ ಕೂತುಕೊಳ್ಳ ಎಂದು ತಮಾಷೆ ಮಾಡುತ್ತಾರೆ.
ಅದಕ್ಕೆ ಸಚಿವ ಪ್ರಿಯಾಂಕಾ ಖರ್ಗೆ ಕೌಂಟರ್ ನೀಡಿ, ಎಲ್ಲಿ ನೀವು ದೂರು ನೀಡುತ್ತಿದ್ದೀರಿ. ಹಾಗೆಯೇ ಲೋಕಾಸಭೆಯಲ್ಲೂ ನಾವೂ ಕೂಡಾ ಇದೇ ರೀತಿಯ ಸಮಸ್ಯೆ ಅನುಭವಿಸುತ್ತಿದ್ದೇವೆ. ಲೋಕಸಭೆಯಲ್ಲೂ ವಿರೋಧ ಪಕ್ಷದ ನಾಯಕರ ಮುಖಗಳನ್ನು ತೋರಿಸುತ್ತಿಲ್ಲ ಎಂದು ಕೌಂಟರ್ ಕೊಡುತ್ತಾರೆ.
ವಿರೋಧ ಪಕ್ಷದ ದೂರನ್ನು ಸ್ವೀಕರಿಸಿದ ಸ್ಪೀಕರ್ ಯುಟಿ ಖಾದರ್ ಅವರು, ಈ ಬಗ್ಗೆ ಟೆಕ್ನಿಕಲ್ ಟೀಂ ಕರೆಸಿ ಸರಿ ಮಾಡುತ್ತೇವೆ. ಇದು ಸಮಯ ತೆಗೆದುಕೊಳ್ಳುತ್ತದೆ. ರಾಜಕಾರಣಿಗಳ ಪ್ರಚಾರ ಎಂಬುದು ಆಕ್ಸಿಜನ್ ಇದ್ದ ಹಾಗೇ. ನಿಮ್ಮ ಮೇಲಿನ ಕಾಳಜಿಯಿಂದ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದರು.