ಪವಿತ್ರಾ ಸ್ನಾನ ಮಾಡಿದ ಡಿಕೆಶಿಯಲ್ಲಿ ಎಷ್ಟು ಪಾಪ ಕಳೀತು ಅಂತ ಖರ್ಗೆ ವರದಿ ಕೇಳ್ಬೇಕು: ಯತ್ನಾಳ್

Sampriya

ಸೋಮವಾರ, 10 ಫೆಬ್ರವರಿ 2025 (17:04 IST)
Photo Courtesy X
ನವದೆಹಲಿ: ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಪುಣ್ಯಸ್ನಾನ ಮಾಡಿದ್ದಾರೆ. ಎಷ್ಟು ಪಾಪ ಕಳೀತು ಅಂತ ಖರ್ಗೆ ವರದಿ ಪಡೀಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು, ಗಂಗೆಯಲ್ಲಿ ಮುಳುಗೋದ್ರಿಂದ ಬಡತನ ಹೋಗಲ್ಲ, ಹೊಟ್ಟೆ ತುಂಬಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.  ಇದನ್ನು ಮುಂದಿಟ್ಟು ಯತ್ನಾಳ್ ಅವರು ಖರ್ಗೆ ಅವರನ್ನು ಪ್ರಶ್ನೆ ಮಾಡಿದ್ದಾರೆ.

ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್‌ ದಂಪತಿ ಮಹಾ ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿ, ಅವರವರ ವೈಯಕ್ತಿಕ ಭಕ್ತಿಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವರು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಎಷ್ಟು ಪಾಪ ಕಳೆದು ಹೋಯಿತು ಎಂದು ಮಲ್ಲಿಕಾರ್ಜುನ ಖರ್ಗೆ ವರದಿ ಪಡೆಯಬೇಕು. ಹಿಂದೂಗಳೇ ವೋಟ್ ಹಾಕೋದು, ಕಡೆಗೆ ಮುಸ್ಲಿಮರಿಂದ ಗೆದ್ದೆವು ಅಂತ ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಯತ್ನಾಳ್ ಟೀಂ ದೆಹಲಿಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ದೆಹಲಿಗೆ ಸೋಮಣ್ಣ ಮನೆ ಪೂಜೆ ಸಲುವಾಗಿ ಬಂದಿದ್ದೇವೆ. ಮುಂದೆ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಎಲ್ಲರಿಗೂ ಬನ್ನಿ ಎಂದು ಆಹ್ವಾನ ನೀಡಿದ್ದರು ಹಾಗಾಗಿ ಬಂದಿದ್ದೇವೆ. ಸೋಮಣ್ಣನವರು ನಮಗೆ ಆತ್ಮೀಯರಿದ್ದಾರೆ. ರೈಲ್ವೇ ಮಂತ್ರಿಗಳಾದ ಮೇಲೆ ನಮ್ಮ ಕೆಲಸ ಮಾಡಿಕೊಟ್ಟಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ