ಮಂಗಳೂರು: ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟುಕೊಂಡಿದ್ದ ಬಸ್ ಮಾಲಿಕ ಸೋಷಿಯಲ್ ಮೀಡಿಯಾ ಬೆದಿಕೆಗೆ ಜಗ್ಗಿ ಜೆರುಸಲೇಂ ಎಂದು ಹೆಸರು ಬದಲಾಯಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೂಡಬಿದಿರೆ-ಕಿನಿಗೋಳಿ-ಕಟೀಲು-ಮುಲ್ಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಹೆಸರನ್ನು ಮಾಲಿಕ ಇಸ್ರೇಲ್ ಟ್ರಾವೆಲ್ಸ್ ಎಂದು ಇಟ್ಟುಕೊಂಡಿದ್ದ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೂರು ನೀಡುವುದಾಗಿ ಬೆದರಿಕೆ ಬಂದಿತ್ತು.
ಇಸ್ರೇಲ್ ಮೇಲೆ ಮಾಲಿಕನಿಗೆ ಯಾಕೆ ಪ್ರೀತಿ?
ಅಷ್ಟಕ್ಕೂ ಈ ಬಸ್ ಮಾಲಿಕನಿಗೆ ಇಸ್ರೇಲ್ ಮೇಲೆ ಯಾಕೆ ಪ್ರೀತಿ ಎಂದು ನೀವು ಕೇಳಬಹುದು. ಅದಕ್ಕೂ ಆತ ಕಾರಣ ನೀಡಿದ್ದಾನೆ. ಇಸ್ರೇಲ್ ನನಗೆ ಜೀವನ ನೀಡಿದೆ. ಇದೇ ದೇಶದಲ್ಲಿ ಜೆರುಸಲೇಂ ಎಂಬ ಪವಿತ್ರ ಭೂಮಿಯಿರುವುದು. ಇಸ್ರೇಲ್ ನ ವ್ಯವಸ್ಥೆ ನನಗೆ ತುಂಬಾ ಇಷ್ಟ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದರಿಂದ ಯಾರಿಗೂ ನೋವಾಗಬಾರದು ಎಂಬ ಉದ್ದೇಶಕ್ಕೆ ಬಸ್ ಹೆಸರನ್ನು ಬದಲಾಯಿಸಿದೆ ಎಂದಿದ್ದಾರೆ. ಬಸ್ ಮಾಲಿಕ ಮೊದಲು ಇಸ್ರೇಲ್ ನಲ್ಲೇ ಕೆಲಸ ಮಾಡುತ್ತಿದ್ದರು. ಈಗ ಕಟೀಲ್ ನಲ್ಲಿ ನೆಲೆಸಿದ್ದಾರೆ.