ಫೇಸ್‌ಬುಕ್‌ನಲ್ಲಿ ಹಿಂದೂ ದೇವರ ಅವಹೇಳನ, ಕಠಿಣ ಕ್ರಮಕ್ಕೆ ಒತ್ತಾಯ

Sampriya

ಬುಧವಾರ, 11 ಸೆಪ್ಟಂಬರ್ 2024 (18:54 IST)
Photo Courtesy X
ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಹ ಚಿತ್ರಗಳನ್ನು ಪ್ರಕಟ ಮಾಡಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ  ವಕೀಲ ತೀರ್ಥೇಶ್ ಪಿ ದೂರು ನೀಡಿದ್ದಾರೆ.

ಫ್ಯಾಕ್ಟ್‌ ವಿಡ್ (factvid@gmail.com) ಪುಟದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ನಗರದ ಉರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

 ಉರ್ವದ ದಾಮೋದರ ಪ್ರಭು ಕಂಪೌಂಡ್ ನಿವಾಸಿಯಾಗಿರುವ ವಕೀಲ ತೀರ್ಥೇಶ್‌ ಪಿ. ದೂರಿನಲ್ಲಿ ಹೀಗಿದೆ. ನಾನು ಆ.21ರಂದು ಫೇಸ್‌ಬುಕ್‌ ನೋಡುತ್ತಿದ್ದಾಗ 'ಫ್ಯಾಕ್ಟ್‌ ವಿಡ್' ಪುಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಭಗವಾನ್‌ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ಹಿಂದೂ ದೇವರ ಚಿತ್ರಗಳನ್ನು ಮಹಿಳೆಯರ ಜೊತೆ ವರ್ತಿಸಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡಿಸುತ್ತಿರುವಂತೆ ವಿವಿಧ ಭಂಗಿಗಳಲ್ಲಿ ಅಶ್ಲೀಲವಾಗಿ ತೋರಿಸಲಾಗಿತ್ತು.

ಈ ಸಂಬಂದ ಫ್ಯಾಕ್ಟ್‌ ವಿಡ್ ಪುಟವನ್ನು ನಿರ್ವಹಿಸುವ ಅಡ್ಮಿನ್‌ ವಿರುದ್ಧ ಹಾಗೂ ಈ ಪುಟದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿ ಕಮೆಂಟ್‌ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೀರ್ಥೇಶ್‌ ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ