ಕರ್ನಾಟಕ ಭ್ರಷ್ಟರ, ಲೂಟಿಕೋರರ ರಾಜ್ಯ- ಕುಮಾರಸ್ವಾಮಿ
ಯಶವಂತಪುರ ವ್ಯಾಪ್ತಿಯ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಸಿವು ಮುಕ್ತ ರಾಜ್ಯವನ್ನು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ ಎಂದು ಟೀಕಿಸಿದ್ದಾರೆ.
ಕೆಲಸಕ್ಕಿಂತ ಹೆಚ್ಚಾಗಿ ಪುಕ್ಕಟೆ ಪ್ರಚಾರ ನಡೆಸಲಾಗುತ್ತಿದೆ ಎಂದು ಕಿಡಿ ಕಾರಿದ ಅವರು ರಾಜ್ಯದಲ್ಲಿ ಎಲ್ಲೆಲ್ಲಿ ಭಯದ ವಾತಾವರಣ ಇದೆ ಎಂಬುದರ ಬಗ್ಗೆ ನನ್ನಲ್ಲಿಗೆ ಕಾಂಗ್ರೆಸ್ಸಿನವರು ಬಂದರೆ ದಾಖಲೆ ಸಮೇತ ನೀಡುತ್ತೇನೆ ಎಂದು ಹೇಳಿದ್ದಾರೆ.