ಮುಂದಿನ ಎರಡು ವಾರ ಲಾಕ್ ಡೌನ್ ಅಲ್ಲದ ನಿರ್ಬಂಧ
ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದೆಲ್ಲವುಗಳೂ ಬಂದ್ ಆಗಲಿವೆ. ಈ ಮೊದಲಿದ್ದಂತೇ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಪಡೆಯಬೇಕಾದರೆ ವಾಹನ ಬಳಸಿ ಹೋಗಬಾರದು. ಕೈಗಾರಿಕೆಗಳಿಗೆ ಈ ಮೊದಲು ಅವಕಾಶವಿತ್ತು. ಆದರೆ ಈಗ ಅಗತ್ಯ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಮತ್ತು ಸ್ಥಳೀಯ ಕಾರ್ಮಿಕರನ್ನು ಒಳಗೊಂಡ ಕೈಗಾರಿಕೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಉಳಿದಂತೆ ಈ ಮೊದಲಿನ ಕಟ್ಟಪಾಡುಗಳೇ ಜಾರಿಯಲ್ಲಿರಲಿದೆ.