ಬಹು ದಿನಗಳ ನಂತರ ಶಾಲಾ ಕಾಲೇಜು ಓಪನ್ ಗೆ ಕೋವಿಡ್ ಸಲಹಾ ಸಮಿತಿ ಹಾಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾದರೆ ಕಳೆದ ಎರಡು ವರ್ಷಗಳಿಂದ ಶಾಲಾ ಕಾಲೇಜ್ ಗೆ ಬರದ ವಿದ್ಯಾರ್ಥಿಗಳು ಈಗ ಬರ್ತಾರಾ? ಅಥವಾ ಮೂರನೇ ಅಲೆ ಅಂತಾ ಪೋಷಕರು ಬೇಡ ಅಂತಾರಾ? ಹಾಗಾದರೆ ಏನಾಗುತ್ತೆ ವಿದ್ಯಾರ್ಥಿಗಳ ಸ್ಕೂಲ್ ಭವಿಷ್ಯ?
ಕೊವೀಡ್ ಎಂಬ ಮಹಾಮರಿಯಿಂದ ಕಳೆದ ಸುಮಾರು 18 ತಿಂಗಳಿಂದ ಶಾಲೆಯಿಂದ ವಂಚಿತರಾಗಿ ಕಲಿಕೆಯಿಂದ ವಿದ್ಯಾರ್ಥಿಗಳು ದೂರ ಇರುವಂತೆಯಾಗಿತ್ತು. ಆದ್ರೆ ಇದೀಗ ಸರ್ಕಾರ ಇದೇ ತಿಂಗಳು 23 ರಿಂದ ಹಂತ ಹಂತವಾಗಿ ಶಾಲೆ ಆರಂಭ ಮಾಡುವುದಾಗಿ ಏಕಾಏಕಿ ಹೇಳಿಕೆ ಕೊಟ್ಟು ಯಡವಟ್ಟು ಮಾಡ್ತಿದಿಯಾ ಎಂಬ ಪ್ರಶ್ನೆ ಉದ್ಬವವಾಗ್ತಿದೆ.ಏಕೆಂದರೆ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಲಸಿಕೆ ಬಿಟ್ಟಿಲ್ಲ. ಯಾವುದೇ 16 ವರ್ಷದ ಒಳಗೆ ಇರುವ ವಿದ್ಯಾರ್ಥಿ ಲಸಿಕೆ ಪಡೆದಿಲ್ಲ. ಆದ್ರೆ ಇದೀಗ ಮಕ್ಕಳಿಗೆ ಲಸಿಕೆ ಕೊಡದೇ ಶಾಲೆ ಆರಂಭ ಮಾಡುವುದಾಗಿ ಹೇಳಿದ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ.
ಸಿದ್ಧತೆ ಮಾಡಿಕೊಳ್ಳದೆ ಶಾಲೆ ಆರಂಭ ಮಾಡಿ ಮಕ್ಕಳಿಗೆ ಕಂಟಕ ತರುತ್ತಾರಾ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡ್ತಿದೆ.ಒಂದು ಕಡೆ ಕೊರೊನಾ ಮೂರನೇ ಅಲೆಯ ಆರ್ಭಟ ಮತ್ತೊಂದು ಕಡೆ ಟೆಲ್ಟಾ ಪ್ಲಸ್ ವೈರಸ್ ಆತಂಕ. ಈ ಎರಡರ ನಡುವೆ ವಿದ್ಯಾರ್ಥಿಗಳ ಜೀವ ಮುಖ್ಯನಾ? ಭವಿಷ್ಯ ಮುಖ್ಯನಾ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತಿದೆ.
ಪೋಷಕರಾದ ವಾಣಿ
ಮಗುವಿನ ಭವಿಷ್ಯಕ್ಕಿಂತ ಜೀವನೇ ಮುಖ್ಯವೆಂದು ಹೇಳ್ತಾರೆ..ಅಷ್ಟೇ ಅಲ್ಲದೇ ಲಸಿಕೆ ಇಲ್ಲದೆ ಯಾವುದೇ ಕಾರಣಕ್ಕೂ ಮಕ್ಕಳನ್ನ ಶಾಲೆಗೆ ಕಳಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು.ಒಟ್ನಲ್ಲಿ ಮೂರನೇ ಅಲೆ ಆರ್ಭಟ ಇದೆ ಅಂತಾ ತಜ್ಞರು ಸೂಚನೆ ಕೊಟ್ರು ಸಹ ಸರ್ಕಾರ ಉಢಾಪೆ ಹೇಳಿಕೆ ನೀಡುವ ಮೂಲಕ ಮಕ್ಕಳ ಜೀವದ ಜೊತೆ ಭವಿಷ್ಯದ ಚೆಲ್ಲಾಟವಾಡುವುದಕ್ಕೆ ಮುಂದಾಗಿದೆ . ಹಾಗಾಗಿ ಪೋಷಕರು ಮೊದಲು ಲಸಿಕೆ ಕೊಡಿಅನಂತರ ಶಾಲೆ ಆರಂಭಿಸಿ ಎಂದು ಒಕ್ಕೂರಿಲಿನಿಂದ ಒತ್ತಾಯಿಸಿದ್ದಾರೆ.