ವೀಸಾ ಅವಧಿ ಮುಗಿದ ವಿದೇಶಿ ವಿದ್ಯಾರ್ಥಿಗಳ ಹುಡುಕಾಟದಲ್ಲಿ ಪೊಲೀಸ್ ಇಲಾಖೆ

ಸೋಮವಾರ, 8 ಫೆಬ್ರವರಿ 2016 (15:32 IST)
ವೀಸಾ ಅವಧಿ ಮುಕ್ತಾಯವಾದ ನಂತರ ಕಾನೂನುಬಾಹಿರವಾಗಿ 500 ವಿದ್ಯಾರ್ಥಿಗಳು ಭಾರತದಲ್ಲಿ ನೆಲೆಸಿದ್ದಾರೆ. ನಗರದಲ್ಲಿ ವೀಸಾ ಅವಧಿ ಮುಕ್ತಾಯವಾದ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ನಗರದಲ್ಲಿ ಆಫ್ರಿಕಾ ಮೂಲದ ವಿದ್ಯಾರ್ಥಿಗಳು ನಡೆಸುತ್ತಿರುವ ಪುಂಡಾಟಿಕೆಯ ಘಟನೆಗಳಿಂದಾಗಿ ಎಚ್ಚೆತ್ತುಕೊಂಡ ಸರಕಾರ, ಇದೀಗ ವೀಸಾ ಅವಧಿ ಮುಕ್ತಾಯವಾದ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪೊಲೀಸ್ ಇಲಾಖೆ ವಿದೇಶಿಗರ ಪ್ರಾಂತಿಯ ನೋಂದಣಿ ಕಚೇರಿಯ ಸಹಯೋಗದೊಂದಿಗೆ ವೀಸಾ ಅವಧಿ ಮುಕ್ತಾಯವಾದ ವಿದ್ಯಾರ್ಥಿಗಳ ಪತ್ತೆ ಕಾರ್ಯ ಆರಂಭಿಸಿದೆ. ಕೇಂದ್ರ ಸರಕಾರದ ಸಹಯೋಗ ಕೂಡಾ ಪಡೆಯಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
 
ಪೊಲೀಸ್ ಸಮೀಕ್ಷೆಯ ಪ್ರಕಾರ, ಕಳೆದ ವರ್ಷ 500 ಆಫ್ರಿಕಾ ದೇಶದ ವಿದ್ಯಾರ್ಥಿಗಳ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ