ಕರ್ನಾಟಕ ಪೊಲೀಸ್ ಗೆ ಹೊಸ ಹೆಗ್ಗಳಿಕೆ: ದೇಶಕ್ಕೇ ನಂ1

Krishnaveni K

ಶನಿವಾರ, 6 ಜುಲೈ 2024 (13:55 IST)
ಬೆಂಗಳೂರು: ದೇಶದ ಪ್ರತಿಷ್ಠಿತ India justice Report ನವರು ನಡೆಸಿದ ಸಮೀಕ್ಷೆ ಮತ್ತು ವರದಿಯಲ್ಲಿ , ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice delivery) ಯಲ್ಲಿ ಪ್ರಥಮ‌ ಸ್ಥಾನ‌ ಪಡೆದಿದೆ.

ಒಟ್ಟು 10 ಅಂಕಗಳನ್ನು ಇಟ್ಟು ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ 6.38 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ‌ ಸ್ಥಾನ ಗಳಿಸಿದೆ. India justice Report ಅನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರಸ್ತಾಪಿಸಿ ಈ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿದರು. ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಈ‌ ಕೆಳಗಿನ ತಂತ್ರಾಂಶ ಮತ್ತು ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.

*ಸೀನ್ ಆಫ್ ಕ್ರೈಂ ಕೈಪಿಡಿ
*ಸಂಚಯ: ಹೊಸ ಕ್ರಿಮಿನಲ್ ಕಾನೂನುಗಳ ಡಿಜಿಟಲ್ ತಂತ್ರಾಂಶ, ಆಪ್ ಬಿಡುಗಡೆ.
*ರಿಯಲ್ ಟೈಂ ಟ್ರಾಕಿಂಗ್ ಆಫ್ ಹೊಯ್ಸಳ ತಂತ್ರಾಂಶ
*ಬೆಂಗಳೂರು ಸಿಟಿ ಪೊಲೀಸ್- ಸೇಫ್ ಕನೆಕ್ಟ್ (ಕಮಾಂಡ್ ಸೆಂಡರ್ ಜೊತೆಗೆ ನೊಂದವರು ಆಡಿಯೊ, ವಿಡಿಯೊ ಕಾಲ್ ಮೂಲಕ ಸಂಪರ್ಕ‌ ಸಾಧಿಸುವ ಸಾಧನ)
*ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (ಸೈಬರ್ ಕ್ರೈಂ ಕೈಪಿಡಿ)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ