ನೀವು ತೊಡೆ ತಟ್ಟಿದರೆ ನಾವು ತೊಡೆ ಮುರಿಯುತ್ತೇವೆ: ಸಿಟಿ ರವಿ ಎಚ್ಚರಿಕೆ

Krishnaveni K

ಬುಧವಾರ, 10 ಸೆಪ್ಟಂಬರ್ 2025 (13:43 IST)
ಮಂಡ್ಯ: ಮದ್ದೂರಿನಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಗಲಾಟೆ ಬಗ್ಗೆ ಬಿಜೆಪಿ ಎಂಎಲ್ ಸಿ ಸಿಟಿ ರವಿ ಪ್ರತಿಕ್ರಿಯಿಸಿದ್ದು ನೀವು ತೊಡೆ ತಟ್ಟಿದರೆ ನಾವು ತೊಡೆ ಮುರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಕಿಡಿಗೇಡಿಗಳು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮೈಸೂರು ಸಂಸದ ಯದುವೀರ್ ಒಡೆಯರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಈ ಸಂದರ್ಭದಲ್ಲಿ ಮಾತನಾಡಿರುವ ಅವರು ನಾವು ಹಿಂದೂ ವಿಚಾರವನ್ನು ರಾಜಕೀಯಕ್ಕೆ ಬಳಸಲ್ಲ. ಆದರೆ ನೀವು ತೊಡೆ ತಟ್ಟಿದರೆ ನಾವು ತೊಡೆ ಮುರಿಯಬೇಕಾಗುತ್ತದೆ. ತಲೆ ತೆಗೆಯಬೇಕಾಗುತ್ತದೆ ಎಂದು ಕಿಡಿ ಹೊತ್ತಿಸುವ ಮಾತುಗಳನ್ನಾಡಿದ್ದಾರೆ.

ಅಷ್ಟೇ ಅಲ್ಲದೆ, ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಶತಮಾನಗಳ ಹಿಂದೆ ಹಿಂದೂ ಸಮಾಜ ಮರೆತ "ಶಾಸ್ತ್ರಾಭ್ಯಾಸ" ಹಾಗು "ಶಸ್ತ್ರಾಭ್ಯಾಸ" ಎರಡನ್ನೂ ಮತ್ತೆ ನೆನಪಿಸಿಕೊಂಡು ಕಲಿಯಬೇಕಾದ ಅತ್ಯಂತ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ಇದು "ಅಗತ್ಯ" ಅಷ್ಟೆ ಅಲ್ಲಾ ಬದಲಾಗಿ "ಅನಿವಾರ್ಯ" ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ