ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ವರದಿಗಳ ಪ್ರಕಾರ ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈ ದಿನದ ಹವಾಮಾನ ವರದಿ ಇಲ್ಲಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಎರಡು ದಿನಗಳಿಂದ ಮಳೆಯಾಗುತ್ತಿದೆ. ಹವಾಮಾನ ವರದಿ ಪ್ರಕಾರ ಆಗಸ್ಟ್ 9 ರಿಂದ 13 ರವರೆಗೆ ಭಾರೀ ಮಳೆಯ ಸೂಚನೆಯಿತ್ತು. ಅದರಂತೆ ನಾಳೆಯವರೆಗೂ ರಾಜ್ಯದಲ್ಲಿ ಭಾರೀ ಮಳೆಯ ಸೂಚನೆಯಿದೆ.
ಕರಾವಳಿ ಭಾಗದಲ್ಲಿ ಈ ಬಾರಿ ಅತೀ ಹೆಚ್ಚು ಮಳೆಯಾಗಿತ್ತು. ಆದರೆ ಮೊದಲಿನ ಅಬ್ಬರವಿಲ್ಲದೇ ಹೋದರೂ ಕರಾವಳಿ ಈ ಜಿಲ್ಲೆಗಳಲ್ಲಿ ಈಗಲೂ ಮಳೆಯಾಗುತ್ತಲೇ ಇದೆ. ವಿಶೇಷವಾಗಿ ಇಂದು ಉಡುಪಿ ಜಿಲ್ಲೆಗೆ ಭಾರೀ ಮಳೆಯಾಗುವ ಸೂಚನೆಯಿದೆ.