Karnataka Weather: ಬೆಂಗಳೂರಿಗರೇ ಇಂದಿನ ಹವಾಮಾನದ ಬಗ್ಗೆ ಎಚ್ಚರ

Krishnaveni K

ಬುಧವಾರ, 6 ಆಗಸ್ಟ್ 2025 (08:31 IST)
ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಇಂದು ವಿಶೇಷವಾಗಿ ಬೆಂಗಳೂರಿಗರು ಹವಾಮಾನದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.

ಕಳೆದ ಎರಡು ದಿನಗಳಿಂದ ಮತ್ತೆ ಮಳೆಯ ಅಬ್ಬರ ರಾಜ್ಯಾದ್ಯಂತ ಹೆಚ್ಚಾಗಿದೆ. ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮಾತ್ರ ಕಳೆದ ವಾರವೂ ಭಾರೀ ಮಳೆಯಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ಉಳಿದೆಡೆ ತಕ್ಕ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಈ ವಾರ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ.

ಇಂದಿನವರೆಗೂ ಬೆಂಗಳೂರಿಗೆ ಆರೆಂಜ್ ಅಲರ್ಟ್ ಇರಲಿದೆ. ನಿನ್ನೆಯಂತೆ ಇಂದೂ ಬೆಂಗಳೂರಿನಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ವಿಶೇಷವಾಗಿ ಇಂದು ದಿನವಿಡೀ ಮಳೆಯ ವಾತಾವರಣವಿರಲಿದೆ. ಹೀಗಾಗಿ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವವರು ಎಚ್ಚರಿಕೆಯಿಂದಿರಬೇಕು.

ಬೆಂಗಳೂರು ಹೊರತುಪಡಿಸಿದರೆ ಚಾಮರಾಜನಗರ, ಕೋಲಾರ, ತುಮಕೂರು ಜಿಲ್ಲೆಗಳಲ್ಲೂ ಇಂದು ಭಾರೀ ಮಳೆಯಾಗುವ ಸಂಭವವಿದೆ. ಈ ಜಿಲ್ಲೆಗಳನ್ನು ಬಿಟ್ಟು ಉಳಿದೆಲ್ಲಾ ಜಿಲ್ಲೆಗಳಲ್ಲೂ ಇಂದು ಸಾಧಾರಣ ಮಳೆ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ