ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಲಂಚ ತೆಗೆದುಕೊಂಡಿತೇ?!
ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ನೀವು ಕಾರ್ಯಕ್ರಮ ನಡೆಸಿ. ನಮ್ಮ ಕಾರ್ಯಕರ್ತರು ನಾವು ಹೇಳಿದರೆ ಮಾತ್ರ ಪ್ರತಿಭಟನೆ ನಡೆಸುತ್ತಾರೆ. ನೀವು 30 ಲಕ್ಷ ನಮ್ಮ ಬಾಸ್ ಗೆ ಕೊಡಿ. ಪೊಲೀಸರಿಂದ ಒಪ್ಪಿಗೆ ಪಡೆದುಕೊಂಡು ಬನ್ನಿ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕರವೇ ನಾಯಕರು ಹೇಳುತ್ತಿರುವ ವಿಡಿಯೋ ತುಣುಕುಗಳನ್ನು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.
ಆದರೆ ಇದೆಲ್ಲಾ ಕನ್ನಡ ಪರ ಸಂಘಟನೆಗಳ ಹೋರಾಟ ಹತ್ತಿಕ್ಕುವ ಯತ್ನ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಆರೋಪಿಸಿದ್ದಾರೆ. ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವ ಕುರಿತಂತೆ ಅವರು ಮಾತನಾಡಿದ್ದರಷ್ಟೇ. ಬೇರೆ ಯಾವುದೇ ಅಕ್ರಮ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.