ಸಿಎಂ ಬಿಎಸ್ ವೈ ಬದಲಾವಣೆಗೆ ತೆರೆಮರೆಯಲ್ಲೇ ಕಸರತ್ತು?!

ಭಾನುವಾರ, 31 ಮೇ 2020 (09:32 IST)
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಭಿನ್ನಮತ ಸ್ಪೋಟಗೊಂಡಿದೆ. ಅಧಿಕಾರ ಪಡೆಯಲು ಶಾಸಕರು ಒಳಗೊಳಗೇ ಮೀಟಿಂಗ್ ಮಾಡುತ್ತಿದ್ದಾರೆ. ಇವರೆಲ್ಲರ ಅಸಮಾಧಾನದ ಟಾರ್ಗೆಟ್ ಸಹಜವಾಗಿ ಸಿಎಂ ಬಿಎಸ್ ವೈ.


ಈ ಅತೃಪ್ತರ ಗುಂಪು ಈಗ ಸಿಎಂ ಸ್ಥಾನದಲ್ಲಿರುವ ಯಡಿಯೂರಪ್ಪನವರನ್ನೇ ಬದಲಾಯಿಸಲು ಮಸಲತ್ತು ನಡೆಸಿದೆಯಾ ಎಂಬ ಅನುಮಾನ ಮೂಡಿದೆ.

ಕೆಲವು ಮೂಲಗಳ ಪ್ರಕಾರ ಈ ಅಸಮಾಧಾನಿತ ಶಾಸಕರು ಬಿಎಸ್ ವೈ ಬದಲಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ಸಿಎಂ ಸ್ಥಾನಕ್ಕೇರಿಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಒಂದು ವೇಳೆ ಈ ಒತ್ತಾಯ ಜಾಸ್ತಿಯಾದರೆ ಮತ್ತೆ ಬಿಜೆಪಿಯಲ್ಲಿ 2008 ರ ಪ್ರಹಸನ ಮರುಕಳಿಸುವ ಸಾಧ‍್ಯತೆಯಿದೆ. 2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತೃಪ್ತ ಶಾಸಕರ ಒತ್ತಡದಿಂದಾಗಿ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಆ ಬಳಿಕ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಕೆಲವು ಕಾಲ ಮುಖ್ಯಮಂತ್ರಿಯಾದರು. ಈ ಬಾರಿಯೂ ಯಡಿಯೂರಪ್ಪ ಅಂತಹದ್ದೇ ಸಂದಿಗ್ಧತೆಗೆ ಸಿಲುಕಲಿದ್ದಾರಾ ಅಥವಾ ಬಂಡಾಯಕ್ಕೆ ಮದ್ದು ಹಚ್ಚುತ್ತಾರಾ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ