Karnataka 2nd PU result live: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ: ಹೆಣ್ಮಕ್ಳೇ ಸ್ಟ್ರಾಂಗ್

Krishnaveni K

ಮಂಗಳವಾರ, 8 ಏಪ್ರಿಲ್ 2025 (13:32 IST)
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಹೆಣ್ಣುಮಕ್ಳೇ ಸ್ಟ್ರಾಂಗ್ ಎಂದು ಸಾಬೀತುಪಡಿಸಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ 73.45 ಶೇಕಡಾ ಫಲಿತಾಂಶ ಬಂದಿದೆ.

ದ್ವಿತೀಯ ಪಿಯು ಪರೀಕ್ಷೆಗೆ ಒಟ್ಟು 6,37, 805 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 4,68,439 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೊದಲಿಗರಾಗಿದ್ದಾರೆ. ಒಟ್ಟು 2,69,212 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. 1,99,227 ಬಾಲಕರು ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾರೆ.

ಇನ್ನು ಜಿಲ್ಲೆ ಪೈಕಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ರಾಜ್ಯಕ್ಕೆ ಫಸ್ಟ್ ಆಗಿದ್ದರೆ ದಕ್ಷಿಣ ಕನ್ನಡ 93.57% ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಶ್ರೇಯಾ 597 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಕೆನರಾ ಕಾಲೇಜಿನ ದೀಪಾಶ್ರೀ 599 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಸಂಜನಾ ಬಾಯಿ 597 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಯಾದಗಿರಿ 48.45% ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ 85.36%, ಬೆಂಗಳೂರು ಉತ್ತರದಲ್ಲಿ 83.31% ಫಲಿತಾಂಶ ಬಂದಿದೆ. ಇಂದು ಮಧ್ಯಾಹ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಇದೀಗ https://karresults.nic.in/  ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ