Karnataka Weather: ಬೆಂಗಳೂರು ಹವಾಮಾನದಲ್ಲಿ ದಿಡೀರ್ ಬದಲಾವಣೆ

Krishnaveni K

ಸೋಮವಾರ, 17 ಮಾರ್ಚ್ 2025 (19:27 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಹವಾಮಾನದಲ್ಲಿ ಇಂದಿನಿಂದ ದಿಡೀರ್ ಬದಲಾವಣೆ ಕಂಡುಬರುತ್ತಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.

ಕಳೆದ ವಾರ ಆರಂಭದಲ್ಲಿ ಬೆಂಗಳೂರಿನಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಅದು ಬಿಟ್ಟರೆ ಕಳೆದ ಫೆಬ್ರವರಿಯಿಂದ ಬೆಂಗಳೂರಿನಲ್ಲಿ ವಿಪರೀತ ಬಿಸಿಲಿನ ವಾತಾವರಣವಿದೆ. ಮಧ್ಯಾಹ್ನ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲು ಕಂಡುಬಂದಿದೆ.

ಆದರೆ ಇಂದು ದಿಡೀರ್ ಹವಾಮಾನದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇಂದು ಅಪರಾಹ್ನದಿಂದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಬಿಸಿಲು ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ವಿಪರೀತ ಸೆಕೆ ಶುರುವಾಗಿದೆ.

ಇಂದು ಸಂಜೆ ವೇಳೆಗೆ ಮೋಡ ದಟ್ಟಣೆ ಜಾಸ್ತಿಯಾಗಿದ್ದು ರಾತ್ರಿ ತಂಪಾದ ಗಾಳಿ ಬೀಸುತ್ತಿದೆ. ಹೀಗಾಗಿ ಸದ್ಯದಲ್ಲೇ ಮಳೆ ನಿರೀಕ್ಷಿಸಬಹುದಾಗಿದೆ. ಇನ್ನು ಎರಡು ದಿನಗಳಿಗೆ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ