Karnataka Weather: ಇಂದಿನ ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ
ರಾಜ್ಯದಲ್ಲಿ ಈಗ ಹಗಲು ಬಿಸಿಲು ರಾತ್ರಿ ಚಳಿ ಕಂಡುಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಶುಷ್ಕ ವಾತಾವರಣವಿದೆ. ಈ ವಾತಾವರಣ ಇಂದೂ ಮುಂದುವರಿಯಲಿದೆ. ಆದರೆ ಇಂದಿನಿಂದ ಚಳಿ ಮತ್ತಷ್ಟು ಕಡಿಮೆಯಾಗಲಿದೆ.
ಈಗಾಗಲೇ ಹವಾಮಾನ ವರದಿಗಳು ಈ ವರ್ಷ ಫೆಬ್ರವರಿಯಿಂದಲೇ ಬಿಸಿಲಿನ ಝಳ ಹೆಚ್ಚಾಗಲಿದೆ ಎಂದು ಹೇಳಿತ್ತು. ಅದರಂತೆ ಇಂದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದ್ದು, ಬಿಸಿಲಿನ ಝಳ ಹೆಚ್ಚಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.
ನಿನ್ನೆ ರಾಜ್ಯದ ಗರಿಷ್ಠ ತಾಪಮಾನ 28 ಡಿಗ್ರಿಯಷ್ಟಿತ್ತು. ಆದರೆ ಇಂದು 29 ಡಿಗ್ರಿಗೆ ಏರಿಕೆಯಾಗಲಿದೆ. ಇಂದು ಕನಿಷ್ಠ ತಾಪಮಾನ 18 ಡಿಗ್ರಿಗೆ ಏರಿಕೆಯಾಗಲಿದೆ. ವಾರಂತ್ಯಕ್ಕೆ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವೂ ಕಂಡುಬರಲಿದೆ. ಆದರೆ ಸದ್ಯಕ್ಕೆ ಮಳೆಯ ಸೂಚನೆಗಳಿಲ್ಲ.