ಬೆಂಗಳೂರು: ಸತತ ಬಿಸಿಲಿನಿಂದ ಕಂಗೆಟ್ಟಿರುವ ಜನ ಮಳೆ ಯಾವಾಗ ಎಂದು ಎದಿರು ನೋಡುತ್ತಿದ್ದಾರೆ. ದೇಶದ ಹವಾಮಾನ ವರದಿ ನೋಡುವುದಾದರೆ ಮಾರ್ಚ್ ನಲ್ಲಿ ದೇಶದ ಈ ಭಾಗಗಳಿಗೆ ಬಿರುಗಾಳಿ ಸಹಿತ ಮಳೆಯ ಅಬ್ಬರವಿರಲಿದೆ ಎಂದು ವರದಿಗಳು ಹೇಳುತ್ತಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆಯಿಂದಲೇ ಹವಾಮಾನದಲ್ಲಿ ವಿಪರೀತ ಬದಲಾವಣೆಯಾಗುತ್ತಿದೆ. ಒಂದೆಡೆ ಸೆಖೆಯಾಗಿದ್ದರೆ ರಾತ್ರಿ ವಿಪರೀತ ಚಳಿ ಕೂಡಾ ಇದೆ. ಈ ಹವಾಮಾನ ವೈಪರೀತ್ಯ ಜನರನ್ನು ಕಂಗಾಲು ಮಾಡಿದೆ. ಆದರೆ ಇಂದಿನಿಂದ ತಾಪಮಾನ ಸಹಜ ಸ್ಥಿತಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಈ ನಡುವೆ ವಾಯವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಬಿರುಗಾಳಿ ಸದೃಶ ವಾತಾವರಣವಿರಲಿದೆ ಎಂದು ತಿಳಿದುಬಂದಿದೆ. ಭಾರತೀಯ ಹವಾಮಾನ ವರದಿ ಪ್ರಕಾರ ಜಮ್ಮು ಕಾಶ್ಮೀರ, ಲಡಾಖ್, ಹಿಮಾಚಲಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ದೆಹಲಿಯಲ್ಲಿ ಇಂದಿನಿಂದ ಗಾಳಿಯ ಅಬ್ಬರ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಮುಂದಿನ ನಾಲ್ಕೈದು ದಿನಗಳಿಗೆ ಮಳೆಯ ಸಾಧ್ಯತೆಯಿಲ್ಲ.