ಕರ್ನಾಟಕ ಹವಾಮಾನ: ರಾಜ್ಯದ ಈ ಜಿಲ್ಲೆಗಳಿಗೆ ಸದ್ಯಕ್ಕೆ ಪ್ರವಾಸ ಬೇಡ

Krishnaveni K

ಬುಧವಾರ, 5 ಮಾರ್ಚ್ 2025 (08:47 IST)
ಬೆಂಗಳೂರು: ಬೇಸಿಗೆ ಟೈಂ, ಮಕ್ಕಳಿಗೆ ರಜೆಯಿರುತ್ತದೆ ಎಂಬ ಕಾರಣಕ್ಕೆ ಟೂರ್ ಪ್ಲ್ಯಾನ್ ಮಾಡಿಕೊಂಡಿದ್ದರೆ ರಾಜ್ಯದ ಈ ಭಾಗಗಳಿಗೆ ಸದ್ಯಕ್ಕೆ ಹೋಗದಿರುವುದೇ ವಾಸಿ.

ಕರ್ನಾಟಕದಲ್ಲಿ ಈಗ ಕಡುಬಿಸಿಲಿನ ವಾತಾವರಣ ಶುರುವಾಗಿದೆ. ಸದಾ ಕೂಲ್ ಆಗಿರುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಈಗ ಕರಾವಳಿ ನಗರಗಳಂತೆ ಹಾಟ್ ಹಾಟ್ ಆಗಿದೆ. ಹಾಗಿದ್ದ ಮೇಲೆ ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳ ಪರಿಸ್ಥಿತಿ ಕೇಳುವುದೇ ಬೇಡ.

ರಾಜ್ಯದ ಕೆಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ ಮುಂತಾದ ಜಿಲ್ಲೆಗಳ ತಾಪಮಾನ 40 ರ ಗಡಿ ದಾಟಿದೆ. ಈ ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ.

ಇನ್ನೇನು ಮಕ್ಕಳಿಗೆ ಪರೀಕ್ಷೆ ಮುಗಿದು ರಜೆ ಶುರುವಾಗಲು ಕೆಲವೇ ದಿನ ಬಾಕಿಯಿದೆ. ಈ ರಜೆಯಲ್ಲಿ  ಈ ಜಿಲ್ಲೆಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದರೆ ಮುಂದೂಡುವುದೇ ಉತ್ತಮ. ಈ ಜಿಲ್ಲೆಗಳಲ್ಲಿ ಬೇಸಿಗೆಯ ತಾಪ ಇನ್ನಷ್ಟು ಹೆಚ್ಚಾಗಲಿದ್ದು, ಮಧ್ಯಾಹ್ನದ ಹೊತ್ತು ಹೊರಗಡೆ ಓಡಾಡುವುದನ್ನು ತಪ್ಪಿಸಿದರೇ ಒಳ್ಳೆಯದು. ವಿಶೇಷವಾಗಿ ರಜೆ ಸಂದರ್ಭದಲ್ಲಿ ಮಂಗಳೂರು, ಕಾರವಾರ ಮುಂತಾದ ಬೀಚ್ ಸೈಡ್ ಗೆ ಹೋಗಲು ಜನ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ಈ ರಜೆಯಲ್ಲಿ ಟೂರ್ ಪ್ಲ್ಯಾನ್ ಮಾಡಿಕೊಂಡಿದ್ದರೆ ಈ ಜಿಲ್ಲೆಗಳಿಗೆ ಹೋಗದಿರುವುದೇ ವಾಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ