Karnataka Weather:ಗಣೇಶ ಹಬ್ಬದಂದು ಬೆಂಗಳೂರಿನ ಹವಾಮಾನ ವರದಿ ಇಲ್ಲಿದೆ

Sampriya

ಬುಧವಾರ, 27 ಆಗಸ್ಟ್ 2025 (09:44 IST)
ಬೆಂಗಳೂರು:  ಇಂದಿನಿಂದ ದೇಶದಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಸಿಲಿಕಾನ್ ಸಿಟಿಯಲ್ಲಿ ಅಲ್ಲಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಗೌರಿ ಗಣೇಶ ಹಬ್ಬದಂದು ಬೆಂಗಳೂರಿನ ಹಲವೆಡೆ ಮಳೆಯಾಗಿದ್ದು, ಗಣೇಶ ಹಬ್ಬದ ದಿನದಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

ಹವಾಮಾನ ಇಲಾಖೆ ನೀಡಿದ ವರದಿಯಂತೆ ಬೆಂಗಳೂರಿನಲ್ಲಿ ಇಂದು ಬಹುತೇಕ ಮೋಡ ಕವಿದ ವಾತಾವರವಿರಲಿದೆ. ಗರಿಷ್ಠ ತಾಪಮಾನ 27°C ಮತ್ತು ಕನಿಷ್ಠ 21°C. 

ಬೆಂಗಳೂರಿನಲ್ಲಿ 0.25% ಮಳೆಯ ಸಂಭವನೀಯತೆ. ಹಾಗಾಗಿ ಭಾರೀ ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. 

ಇನ್ನೂ ರಾಜ್ಯ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಮಂಗಳವಾರ ನಿರಂತರ ಮಳೆಯಾಗಿದೆ. ಒಟ್ಟಾರೆ ಇಂದು ಕೂಡಾ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದ್ದು, ಕೆಲವೆಡೆ ಜಿಟಿ ಜಿಟಿ ಮಳೆಯಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ