ಬೆಂಗಳೂರು: ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಸಣ್ಣ ಮಟ್ಟಿಗೆ ಮಳೆಯಾಗಿತ್ತು. ಈ ವಾರ ಮಳೆಯಾಗುತ್ತಾ, ಅಥವಾ ಬಿಸಿಲು ಹೆಚ್ಚಾಗಲಿದೆಯಾ ಇಲ್ಲಿದೆ ವಾರದ ಹವಾಮಾನ ವರದಿ.
ರಾಜ್ಯದಲ್ಲಿ ಈಗ ಕಡು ಬೇಸಿಗೆಯ ನಡುವೆ ಅಲ್ಲಲ್ಲಿ ಮಳೆ ತಂಪು ನೀಡುತ್ತಿದೆ. ವಾರಂತ್ಯದಲ್ಲೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಈ ವಾರವೂ ಕೆಲವು ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗುವ ಸೂಚನೆಯಿದೆ.
ಈ ವಾರವಿಡೀ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧದ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಈ ವಾರ ಮಳೆಯ ಸೂಚನೆಯಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ರಾಜ್ಯದ ಸರಾಸರಿ ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಈ ವಾರ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು ಕನಿಷ್ಠ ತಾಪಮಾನ 23 ಡಿಗ್ರಿಯಷ್ಟು ಕಂಡುಬರಲಿದೆ. ಬೆಂಗಳೂರಿನಲ್ಲೂ ಈ ವಾರಂತ್ಯದ ವೇಳೆಗೆ ಗರಿಷ್ಠ ತಾಪಮಾನ 36 ಡಿಗ್ರಿಗೆ ಏರಿಕೆಯಾಗಲಿದೆ. ಇನ್ನು ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಂತೂ ಈ ವಾರವೇ ಗರಿಷ್ಠ ತಾಪಮಾನ 40 ಡಿಗ್ರಿ ದಾಟಲಿದೆ. ಹೀಗಾಗಿ ಈ ವಾರ ವಿಪರೀತ ಬಿಸಿಲು ಎದುರಿಸಲು ಸಿದ್ಧರಾಗಿ.