Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

Krishnaveni K

ಮಂಗಳವಾರ, 29 ಜುಲೈ 2025 (08:42 IST)

ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರವಿಡೀ ರುದ್ರತಾಂಡವವಾಡುತ್ತಿದ್ದ ಮಳೆರಾಯ ಈ ವಾರ ತಣ್ಣಗಾಯಿತೇ? ಇಂದು ರಾಜ್ಯಾದ್ಯಂತ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ.

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ವಾರವಿಡೀ ಮಳೆಯಾಗಿತ್ತು. ಆದರೆ ಈ ವಾರ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಬಿಟ್ಟರೆ ಅಷ್ಟೊಂದು ಮಳೆ ಕಂಡುಬರುತ್ತಿಲ್ಲ. ಈ ವಾರದ ಆರಂಭದ ಎರಡು ದಿನ ರಾಜ್ಯಾದ್ಯಂತ ಮಳೆಯ ಅಬ್ಬರ ಕೊಂಚ ಕಡಿಮೆಯಾಗಲಿದೆ. ಆದರೆ ವಾರಂತ್ಯದಲ್ಲಿ ಮತ್ತೆ ಮಳೆಯಾಗಲಿದೆ.

ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಈಗಲೂ ನಿರಂತರ ಮಳೆಯಾಗುತ್ತಿದೆ. ಆದರೆ ಕಳೆದ ವಾರದಷ್ಟು ಅಬ್ಬರವಿಲ್ಲ ಎನ್ನುವುದೇ ಸಮಾಧಾನಕರ ಅಂಶ. ಈ ವಾರವಿಡೀ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ. ಉಡುಪಿಯಲ್ಲಿ ಕೊಂಚ ಮಳೆಯ ಅಬ್ಬರ ಕಡಿಮೆಯಾಗಲಿದೆ. ಚಿಕ್ಕಮಗಳೂರಿನಲ್ಲೂ ಮಳೆಯ ಅಬ್ಬರ ಕಡಿಮೆಯಾಗಿದೆ. ಇನ್ನು ಕೊಡಗು ಜಿಲ್ಲೆಯಲ್ಲೂ ವಾರವಿಡೀ ಸಾಧಾರಣ ಮಳೆಯಾಗಲಿದೆ.

ಉಳಿದಂತೆ ಹಾವೇರಿ, ಶಿವಮೊಗ್ಗ, ದಾವಣಗೆರೆ, ಗದಗ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಇಂದು ಸಾಧಾರಣ ಮಳೆಯ ನಿರೀಕ್ಷೆಯಿದೆ. ಉಳಿದ ಬಹುತೇಕ ಜಿಲ್ಲೆಗಳಿಗೆ ಇಂದು ಮಳೆಯಿಲ್ಲದೇ ಇದ್ದರೂ ಮೋಡ ಕವಿದ ವಾತಾವರಣವಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ