Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

Krishnaveni K

ಮಂಗಳವಾರ, 20 ಮೇ 2025 (08:32 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಬೆಂಗಳೂರಿಗೆ ಇನ್ನೂ ಮಳೆ ಬರುತ್ತಾ, ಯಾವ ಜಿಲ್ಲೆಗೆ ಏನು ಅಲರ್ಟ್ ಘೋಷಣೆಯಾಗಿದೆ ಇಲ್ಲಿದೆ ನೋಡಿ ವಿವರ.

ಶನಿವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಒಂದೇ ಮಳೆಗೆ ರಾಜ್ಯ ರಾಜಧಾನಿಗೆ ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದೆ. ನಿನ್ನೆಯೂ ಮಳೆಯಾಗಿತ್ತು. ಇಂದೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ಬೆಂಗಳೂರಿನಲ್ಲಿ ನಿನ್ನೆಯಿಂದ ಆರಂಭವಾಗಿ ಮೂರು ದಿನಗಳಿಗೆ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ.

ಹವಾಮಾನ ಇಲಾಖೆ ಈಗಾಗಲೇ ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಳೆಯ ವಾತಾವರಣ ಇನ್ನೂ ಮೂರು ದಿನ ಮುಂದುವರಿಯುವ ನಿರೀಕ್ಷೆಯಿದೆ. ಮಳೆಯಿಂದಾಗಿ ರಾಜ್ಯದ ಗರಿಷ್ಠ ತಾಪಮಾನ 24 ಡಿಗ್ರಿಗೆ ಬಂದು ತಲುಪಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ