Bengaluru Rains: ಪಾಕಿಸ್ತಾನ ಹೇಳಿದ್ದು ನಿಜವಾಯ್ತು ಬೆಂಗಳೂರಲ್ಲಿ ಬಂದರು ಮಾಡಬಹುದು

Krishnaveni K

ಸೋಮವಾರ, 19 ಮೇ 2025 (09:32 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ವರ್ಷಗಳಲ್ಲೇ ಇಲ್ಲದಷ್ಟು ದಾಖಲೆಯ ಮಳೆಯಾಗಿದ್ದು ಪಾಕಿಸ್ತಾನಿಗ ಹೇಳಿದ ಬಂದರು ಈಗ ನಿಜ ಮಾಡಬಹುದೇನೋ. ಬೆಂಗಳೂರಿನ ರಸ್ತೆ ಅವಸ್ಥೆ ಆ ಮಟ್ಟಿಗೆ ತಲುಪಿದೆ.

ಶನಿವಾರದಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ನಿನ್ನೆ ಹಗಲು ಮೋಡ ಕವಿದ ವಾತಾವರಣವಿತ್ತು. ಆದರೆ ರಾತ್ರಿಯಿಡೀ ಸುರಿದ ಮಳೆಗೆ ಜನ ನಿದ್ರೆಗೆಟ್ಟು ಕೂರುವಂತಾಗಿತ್ತು. ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳೂ ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ನಿಂತಿರುವುದು ನೋಡಿ ಜನ ಬೆಂಗಳೂರಿನಲ್ಲಿ ಪಾಕಿಸ್ತಾನಿಗ ಹೇಳಿದಂತೆ ಬಂದರು ನಿರ್ಮಾಣ ಮಾಡಬಹುದು ಎಂದು ಟ್ರೋಲ್ ಮಾಡಿದ್ದಾರೆ.  ಭಾರತ ಮತ್ತು ಪಾಕಿಸ್ತಾನ ನಡುವೆ ಕದನದ ವೇಳೆ ಪಾಕಿಸ್ತಾನಿಗನೊಬ್ಬ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಬೆಂಗಳೂರು ಬಂದರನ್ನು ನಾವು ಉಡಾಯಿಸಿದ್ದೇವೆ ಎಂದು ಕೊಚ್ಚಿಕೊಂಡಿದ್ದ. ಆತನ ಹೇಳಿಕೆ ಸಾಕಷ್ಟು ನಗೆಪಾಟಲಿಗೀಡಾಗಿತ್ತು. ನಮ್ಮಲ್ಲಿ ಸಮುದ್ರವೇ ಇಲ್ಲ ಇನ್ನು ಪೋರ್ಟ್ ಎಲ್ಲಿಂದ ಬರುತ್ತದೆ ಎಂದು ಟ್ರೋಲ್ ಮಾಡಿದ್ದರು. ಇದೀಗ ಬೆಂಗಳೂರಿನ ರಸ್ತೆಗಳು ಸಮುದ್ರದಂತಾಗಿರುವುದಕ್ಕೆ ಪಾಕಿಸ್ತಾನಿಗನ ಕಾಮೆಂಟ್ ಉಲ್ಲೇಖಿಸಿ ಟ್ರೋಲ್ ಮಾಡುತ್ತಿದ್ದಾರೆ.


ವಿಶೇಷವಾಗಿ ಮಾನ್ಯತಾ ಟೆಕ್ ಪಾರ್ಕ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಾರ್ವಜನಿಕರಿಗೆ ಬದಲಿ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಒಟ್ಟು 104 ಮಿ.ಮೀ. ಮಳೆಯಾಗಿದ್ದು ಕಳೆದ 10 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಇಷ್ಟು ಮಳೆಯಾಗಿದೆ. ಇಂದೂ ಕೂಡಾ ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನಗಳಿಗೆ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ