Karnataka Weather: ರಾಜ್ಯದಲ್ಲಿ ಈ ವಾರಂತ್ಯಕ್ಕೆ ಮಳೆಯಿದೆಯೇ ಇಲ್ಲಿದೆ ವಿವರ

Krishnaveni K

ಶನಿವಾರ, 29 ಮಾರ್ಚ್ 2025 (08:44 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರಂತ್ಯಕ್ಕೆ ಕೆಲವು ಕಡೆ ಮುಂಗಾರು ಪೂರ್ವ ಮಳೆಯ ಸಿಂಚನವಾಗಿತ್ತು. ಈ ವಾರಂತ್ಯದಲ್ಲಿ ಮಳೆಯ ಸೂಚನೆಯಿದೆಯೇ? ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ.

ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಒಂದೊಂದು ಮಳೆಯಾಗಿದೆ.

ಆದರೆ ಕಳೆದ ಎರಡು ದಿನಗಳಿಂದ ವರುಣ ಬಿಡುವು ನೀಡಿದ್ದಾನೆ. ಕೆಲವೆಡೆ ಅಲ್ಪ ಸ್ವಲ್ಪ ಮೋಡ ಕವಿದ ವಾತಾವರಣ ಬಿಟ್ಟರೆ ಬಹುತೇಕ ಬಿಸಿಲಿನ ತಾಪ ಮುಂದುವರಿದಿದೆ. ಅದರಲ್ಲೂ ನಿನ್ನೆಯಿಂದ ಗರಿಷ್ಠ ತಾಪಮಾನ ಹೆಚ್ಚಾಗಿದೆ.

ನಿನ್ನೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿತ್ತು. ಇಂದು ಅದೂ ಹೆಚ್ಚಾಗಿ 34 ಡಿಗ್ರಿ ದಾಟುವ ನಿರೀಕ್ಷೆಯಿದೆ. ಇಂದು ರಾಜ್ಯದಾದ್ಯಂತ ವಿಪರೀತ ಬಿಸಿಲಿನ ವಾತಾವರಣವಿರಲಿದೆ. ಈ ವಾರಂತ್ಯಕ್ಕೆ ಯಾವುದೇ ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿಲ್ಲ. ಬದಲಾಗಿ ತಾಪಮಾನ ಹೆಚ್ಚಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ