Karnataka Weather: ಇಂದಿನಿಂದ ರಾಜ್ಯದ ಹವಾಮಾನ ಬದಲಾವಣೆ ಗಮನಿಸಿ

Krishnaveni K

ಶುಕ್ರವಾರ, 28 ಮಾರ್ಚ್ 2025 (08:44 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೆಲವೆಡೆ ಮಳೆಯಾಗಿತ್ತು. ಇಂದಿನಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಹೇಗಿರಲಿದೆ ಇಲ್ಲಿದೆ ವರದಿ.

ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಳೆದ ವಾರ ಮಳೆಯಾಗಿತ್ತು. ಮುಂಗಾರು ಪೂರ್ವ ಮಳೆಯಿಂದಾಗಿ ಗರಿಷ್ಠ ತಾಪಮಾನದಲ್ಲಿ ಕೊಂಚ ಇಳಿಕೆಯಾಗಿತ್ತು. ಹಾಗಿದ್ದರೂ ಉತ್ತರದ ಜಿಲ್ಲೆಗಳಲ್ಲಿ ತಾಪಮಾನ ಎಂದಿನಂತೇ ಮುಂದುವರಿದಿತ್ತು.

ಆದರೆ ಇಂದಿನಿಂದ ಕೆಲವು ದಿನ ರಾಜ್ಯದಲ್ಲಿ ಮಳೆಯ ಸೂಚನೆಯಿಲ್ಲ. ಕೆಲವೆಡೆ ಮೋಡ ಕವಿದ ವಾತಾವರಣ ಬಿಟ್ಟರೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮತ್ತೆ ಹೆಚ್ಚಾಗಲಿದೆ. ರಾಜ್ಯದಲ್ಲಿ ಇಂದು ಗರಿಷ್ಠ ತಾಪಮಾನ 34 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.

ಮಳೆಯ ಸಿಂಚನದ ಖುಷಿಯಲ್ಲಿದ್ದ ದಕ್ಷಿಣ ಕನ್ನಡದಲ್ಲಂತೂ ತಾಪಮಾನ 36 ಡಿಗ್ರಿ ದಾಟಲಿದೆ. ವಿಶೇಷವಾಗಿ ಇನ್ನು ಎರಡು ದಿನ ತಾಪಮಾನ ವಿಪರೀತ ಎನಿಸುವಷ್ಟು ಏರಿಕೆಯಾಗಲಿದೆ. ಬಹುತೇಕ ಜಿಲ್ಲೆಗಳಲ್ಲಿ ಇದೇ ಸ್ಥಿತಿಯಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ